Product SiteDocumentation Site

Red Hat Enterprise Linux 6

Release Notes

Red Hat Enterprise Linux 6.3 ಕ್ಕಾಗಿನ ಬಿಡುಗಡೆ ಟಿಪ್ಪಣಿಗಳು

ಆವೃತ್ತಿ 3


Legal Notice

Copyright © 2012 Red Hat, Inc.
The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
All other trademarks are the property of their respective owners.


1801 Varsity Drive
 RaleighNC 27606-2072 USA
 Phone: +1 919 754 3700
 Phone: 888 733 4281
 Fax: +1 919 754 3701

ಸಾರಾಂಶ
Red Hat Enterprise Linux 6.3 ರಲ್ಲಿ ಅನ್ವಯಿಸಲಾಗಿರುವ ಸುಧಾರಣೆಗಳು ಹಾಗು ಸೇರ್ಪಡೆಗಳನ್ನು ಅತ್ಯುತ್ತಮ ಮಟ್ಟದ ವಿವರಣೆಯನ್ನು ಬಿಡುಗಡೆ ಟಿಪ್ಪಣಿಗಳು ಒದಗಿಸುತ್ತದೆ. Red Hat Enterprise Linux ನ 6.3 ರ ಅಪ್‌ಡೇಟ್‌ನಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ದಸ್ತಾವೇಜನ್ನು ನೋಡಲು ತಾಂತ್ರಿಕ ಟಿಪ್ಪಣಿಗಳನ್ನು ನೋಡಿ.

ಮುನ್ನುಡಿ
1. ಕರ್ನಲ್
2. ಸಾಧನದ ಚಾಲಕಗಳು
3. ಜಾಲಬಂಧ
4. ಸಂಪನ್ಮೂಲ ವ್ಯವಸ್ಥಾಪನೆ
5. ದೃಢೀಕರಣ ಹಾಗು ಇಂಟರ್ಪೊಲೆಬಿಲಿಟಿ
6. ಎಂಟೈಟಲ್ಮೆಂಟ್
7. ವರ್ಚುವಲೈಸೇಶನ್
7.1. KVM
7.2. SPICE
7.3. libvirt
8. ಕ್ಲಸ್ಟರಿಂಗ್ ಮತ್ತು ಹೈ ಅವೈಲೆಬಿಲಿಟಿ
9. ಶೇಖರಣೆ
10. ಸಾಮಾನ್ಯ ಅಪ್‌ಡೇಟ್‌ಗಳು
A. ಪರಿಷ್ಕರಣ ಇತಿಹಾಸ

ಮುನ್ನುಡಿ

Red Hat Enterprise Linux ಸಣ್ಣ ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 6.3 ಬೀಟಾ ಬಿಡುಗಡೆ ಟಿಪ್ಪಣಿಗಳಲ್ಲಿ Red Hat Enterprise Linux 6 ಕಾರ್ಯ ವ್ಯವಸ್ಥೆ ಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಕಿರು ಬಿಡುಗಡೆಯಲ್ಲಿ ಮಾಡಲಾದ ವಿವರಣೆಗಳಿಗಾಗಿ ತಾಂತ್ರಿಕ ಟಿಪ್ಪಣಿಗಳನ್ನು ನೋಡಿ.

ಪ್ರಮುಖ ಅಂಶ

ಜಾಲದಲ್ಲಿ ಇಲ್ಲಿರುವ ಆನ್‌ಲೈನ್ Red Hat Enterprise Linux 6.3 Release Notes, ಅನ್ನು ವಿವರಣಾತ್ಮಕವಾದ, ಅಪ್‌ಟುಡೇಟ್ ಆದಂತಹ ಒಂದು ಆವೃತ್ತಿ ಎಂದು ಪರಿಗಣಿಸಲಾಗುತ್ತದೆ. ಸಂದೇಹಗಳನ್ನು ಹೊಂದಿರುವ ಗ್ರಾಹಕರು ತಮ್ಮಲ್ಲಿರುವ Red Hat Enterprise Linux ನ ಆವೃತ್ತಿಗೆ ಸೂಕ್ತವಾದ ಬಿಡುಗಡೆ ಮತ್ತು ತಾಂತ್ರಿಕ ಟಿಪ್ಪಣಿಗಳನ್ನು ನೋಡುವುದು ಉತ್ತಮ.
Red Hat Enterprise Linux ಜೀವನಚಕ್ರದ ಅಗತ್ಯವಿದೆಯೆ, ಹಾಗಿದ್ದಲ್ಲಿ https://access.redhat.com/support/policy/updates/errata/ ಅನ್ನು ನೋಡಿ.

ಅಧ್ಯಾಯ 1. ಕರ್ನಲ್

ತೆಳು-ಪ್ರಾವಿಶನಿಂಗ್ ಮತ್ತು ಗಾತ್ರಬದಲಿಕೆ ಮಾಡಬಹುದಾದ ಸ್ನ್ಯಾಪ್‌ಶಾಟ್‌ ಸಾಮರ್ಥ್ಯಗಳು
dm-thinp ಗುರಿಗಳಾದಂತಹ, thin ಮತ್ತು thin-pool, ತೆಳು-ಪ್ರಾವಿಶನಿಂಗ್ ಮತ್ತು ಗಾತ್ರಬದಲಿಕೆ ಮಾಡಬಹುದಾದ ಸ್ನ್ಯಾಪ್‌ಶಾಟ್‌ ಸಾಮರ್ಥ್ಯಗಳೊಂದಿಗೆ ಸಾಧನ-ಮ್ಯಾಪರ್ ಸಾಧನವನ್ನು ಒದಗಿಸುತ್ತವೆ. ಈ ಸವಲತ್ತನ್ನು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. ಹೊಸದಾಗಿ ಪರಿಚಯಿಸಲಾದ LVM ತೆಳು-ಪ್ರಾವಿಶನಿಂಗ್‌ ಕುರಿತು ಹೆಚ್ಚಿನ ಮಾಹಿತಿಗಾಗಿ, ಅಧ್ಯಾಯ 9, ಶೇಖರಣೆ ಅನ್ನು ನೋಡಿ.
sysfs mbox ಪ್ಯಾಕೇಜನ್ನು ತೆಗೆದುಹಾಕಲಾಗಿದೆ
lpfc ಚಾಲಕವು sysfs mbox ಸಂಪರ್ಕಸಾಧನವನ್ನು ತೆಗೆದುಹಾಕಿದೆ ಏಕೆಂದರು ಅವುಗಳನ್ನು Emulex ಉಪಕರಣಗಳಿಂದ ಬಳಸಲಾಗುತ್ತಿಲ್ಲ. ಓದು ಮತ್ತು ಬರೆಯುವ ಕಾರ್ಯಗಳನ್ನು ಈಗ ಆಂಶಿಕವಾಗಿ ರಚಿಸಲಾಗಿದೆ ಮತ್ತು ಕೇವಲ -EPERM (ಕಾರ್ಯಕ್ಕೆ ಅನುಮತಿ ಇಲ್ಲ) ಎಂಬ ಸಂಕೇತವನ್ನು ನೀಡುತ್ತದೆ.
ಬೆಂಬಲಿತ Kdump ಗುರಿಗಳು
ಬೆಂಬಲಿಸಲಾಗುವ Kdump ಗುರಿಗಳ (ಅಂದರೆ, ಒಂದು vmcore ಅನ್ನು ಡಂಪ್ ಮಾಡಲು kdump ಬಳಸುವ ಗುರಿಗಳು) ಪಟ್ಟಿಗಾಗಿ, ಈ ಕೆಳಗಿನ Kbase ಲೇಖನವನ್ನು ಓದಿ: https://access.redhat.com/knowledge/articles/41534.
ಹೆಚ್ಚುವರಿ ಆರೋಹಣಾ ಆಯ್ಕೆಗಳಿಗಾಗಿ ಬೆಂಬಲ
Red Hat Enterprise Linux 6.3 ರಲ್ಲಿ /proc/<PID>/ ಕೋಶಗಳನ್ನು ನಿಲುಕಿಸಿಕೊಳ್ಳುವುದನ್ನು ನಿರ್ಬಂಧಿಸುವ ಆರೋಹಣಾ ಆಯ್ಕೆಗಳನ್ನು ಬೆಂಬಲಿಸುತ್ತದೆ. hidepid= ಎಂದು ಕರೆಯಲಾಗುವ ಹೊಸ ಆಯ್ಕೆಯೊಂದನ್ನು ಸೇರಿಸಲಾಗಿದೆ ಮತ್ತು ಮಾಲಿಕರಲ್ಲದವರಿಗೆ ಪ್ರಕ್ರಿಯೆಗಳ ಕುರಿತು ಎಷ್ಟು ಮಾಹಿತಿಯನ್ನು ಒದಗಿಸಬೇಕು ಎನ್ನುವುದನ್ನು ಸೂಚಿಸುತ್ತದೆ. gid= ಆಯ್ಕೆಯು ಎಲ್ಲಾ ಪ್ರಕ್ರಿಯೆಗಳ ಕುರಿತಾದ ಮಾಹಿತಿಯನ್ನು ಸಂಗ್ರಹಿಸುವ ಒಂದು ಗುಂಪನ್ನು ಸೂಚಿಸುತ್ತದೆ. ಸಂಪೂರ್ಣ ವ್ಯವಸ್ಥೆಯಲ್ಲಿನ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ನಡೆಸಬಾರದ, ನಂಬಲಾಗದ ಬಳಕೆದಾರರನ್ನು ಈ ಗುಂಪಿಗೆ ಸೇರಿಸಬಾರದು.
O_DIRECT ಫ್ಲಾಗ್ ಬೆಂಬಲ
FUSE ನಲ್ಲಿ (File system in Userspace) O_DIRECT ಗಾಗಿ ಬೆಂಬಲವನ್ನು ಸೇರಿಸಲಾಗಿದೆ. ಈ ಫ್ಲಾಗ್‌ ಒಂದು ಕಡತದ I/O ನ ಕ್ಯಾಶೆ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ, ಈ ಕಡತವನ್ನು ಬಳಸುವುದರಿಂದ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ, ಆದರೆ ಅನ್ವಯಗಳು ತಮ್ಮದೆ ಆದ ಕ್ಯಾಶಿಂಗ್ ಅನ್ನು ನಡೆಸುವಂತಹ ಕೆಲವು ವಿಶೇಷ ಸಂದರ್ಭಗಳಲ್ಲಿ ಉಪಯುಕ್ತವೆನಿಸುತ್ತದೆ.
CONFIG_STRICT_DEVMEM ಅನ್ನು PowerPC ಯಲ್ಲಿ ಸಕ್ರಿಯಗೊಳಿಸಲಾಗಿದೆ
Red Hat Enterprise Linux 6.3 ರಲ್ಲಿ, PowerPC ಆರ್ಕಿಟೆಕ್ಚರಿಗಾಗಿ CONFIG_STRICT_DEVMEM ಸಂರಚನೆ ಆಯ್ಕೆಯನ್ನು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗಿರುತ್ತದೆ. ಈ ಆಯ್ಕೆಯು /dev/mem ಸಾಧನದ ನಿಲುಕಣೆಯನ್ನು ನಿರ್ಬಂಧಿಸುತ್ತದೆ. ಈ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದಲ್ಲಿ, ಕರ್ನಲ್ ಮತ್ತು ಬಳಕೆದಾರಸ್ಥಳ ಮೆಮೊರಿಯೂ ಸಹ ಸೇರಿದಂತೆ ಎಲ್ಲಾ ಮೆಮೊರಿಗಾಗಿನ ಬಳಕೆದಾರಸ್ಥಳದ ನಿಲುಕಣೆಗೆ ಅನುಮತಿಯನ್ನು ನೀಡಲಾಗುತ್ತದೆ, ಮತ್ತು ಆಕಸ್ಮಿಕ ಮೆಮೊರಿ (ಬರೆಯಲು) ನಿಲುಕಣೆಯು ಅಪಾಯಕ್ಕೆ ಎಡೆಮಾಡಿಕೊಡುತ್ತದೆ.
CONFIG_HPET_MMAP ಅನ್ನು ಸಕ್ರಿಯಗೊಳಿಸಲಾಗಿದೆ
Red Hat Enterprise Linux 6.3 ರಲ್ಲಿ, ಅತ್ಯುತ್ತಮ-ರೆಸಲ್ಯೂಶನ್ ಟೈಮರಿನ ಸಾಮರ್ಥ್ಯವು ಸಕ್ರಿಯಗೊಳಿಸಲಾದ ಬಳಕೆದಾರ ಪ್ರಕ್ರಿಯೆಯ ಮೆಮೊರಿಗೆ HPET ರಿಜಸ್ಟರುಗಳನ್ನು ಮರುಮ್ಯಾಪ್ ಮಾಡುತ್ತದೆ.
ದೊಡ್ಡ ವ್ಯವಸ್ಥೆಗಳಲ್ಲಿ ಸುಧಾರಿತ ಕಾರ್ಯಶೀಲತೆ
Red Hat Enterprise Linux 6.3 ರಲ್ಲಿ ಹಲವಾರು ತೇಪೆಗಳನ್ನು ಅಳವಡಿಸಲಾಗಿದ್ದು, ಇವುಗಳು ಅತ್ಯಂತ ದೊಡ್ಡ ವ್ಯವಸ್ಥೆಗಳಲ್ಲಿ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಬೂಟ್‌ ಸಮಯವನ್ನು ಕಡುಮೆ ಮಾಡುತ್ತದೆ (ತೇಪೆಗಳನ್ನು 2048 ಕೋರುಗಳು ಮತ್ತು 16 TB ಮೆಮೊರಿಯನ್ನು ಹೊಂದಿರುವ ವ್ಯವಸ್ಥೆಗಳಲ್ಲಿ ಪರಿಶೀಲಿಸಲಾಗಿದೆ).
rdrand ಕರ್ನಲ್ ಬೆಂಬಲ
Intel Core i5 ಮತ್ತು i7 ಸಂಸ್ಕಾರಕಗಳು (ಈ ಹಿಂದೆ Ivy Bridge ಎಂದು ಕರೆಯಲಾಗುತ್ತಿತ್ತು) ಕ್ಷಿಪ್ರವಾಗಿ ಮನಸ್ಸಿಗೆ ಬಂದ ಸಂಖ್ಯೆಗಳನ್ನು ಉತ್ಪಾದಿಸಲು ಒಂದು ಹೊಸ rdrand ಸೂಚನೆಗಳನ್ನು ಬೆಂಬಲಿಸುತ್ತವೆ. Red Hat Enterprise Linux 6.3 ರಲ್ಲಿ ಕಳುಹಿಸಲಾಗುವ ಕರ್ನಲ್‌ ಕ್ಷಿಪ್ರವಾಗಿ ಮನಸ್ಸಿಗೆ ಬಂದ ಸಂಖ್ಯೆಯನ್ನು ಉತ್ಪಾದಿಸಲು ಈ ಸೂಚನೆಗಳನ್ನು ಬಳಸುತ್ತದೆ.
ನಿರಂತರ ಶೇಖರಣೆಗಾಗಿ UEFI ಬೆಂಬಲ
ನಿರಂತರ ಶೇಖರಣೆ (pstore), ಪ್ಲಾಟ್‌ಫಾರ್ಮ್ ಅವಲಂಬಿತವಾದ ನಿರಂತರ ಶೇಖರಣೆಗಾಗಿನ ಕಡತ ವ್ಯವಸ್ಥೆ ಸಂಪರ್ಕಸಾಧನವಾಗಿರುವಂತಹ ಇದು UEFI ಅನ್ನು ಬೆಂಬಲಿಸುತ್ತದೆ.
CPU ಗುಂಪಿನ ನಿಶ್ಚಿತ ಕಂಟೈನರ್ ಕಡತಗಳು
CPU ಗುಂಪಿನ ನಿಶ್ಚಿತ ಕಂಟೈನರ್ ಕಡತಗಳಿಗಾಗಿ ಬೆಂಬಲವನ್ನು ಸೇರಿಸಲಾಗಿದೆ. AMD ಗುಂಪಿನ15h ಸಂಸ್ಕಾರಕಗಳೂ ಸೇರಿದಂತೆ, microcode_amd_fam15h.bin ನಂತಹ ಒಂದು ಕಂಟೈನರ್ ಇನ್ನು ಮುಂದೆ ಮೇಲೆ ತಿಳಿಸಿದ ಗುಂಪಿನ ಸಂಸ್ಕಾರಕಗಳಿಗಾಗಿ ಲೋಡ್‌ ಮಾಡಲ್ಪಡುತ್ತವೆ.
USB 3.0 ಬೆಂಬಲ
Red Hat Enterprise Linux 6.3 ರಲ್ಲಿ ಸಂಪೂರ್ಣ USB 3.0 ಗೆ ಬೆಂಬಲವನ್ನು ಸೇರಿಸಲಾಗಿದೆ.
IBM System z ಗಾಗಿ kdump/kexec ಕರ್ನಲ್ ಡಂಪಿಂಗ್ ವ್ಯವಸ್ಥೆ
Red Hat Enterprise Linux 6.3, ರಲ್ಲಿ IBM System z ಪ್ರತ್ಯೇಕ ಮತ್ತು ಹೈಪರ್ವೈಸರ್ ಡಂಪಿಂಗ್ ರಚನಾವ್ಯವಸ್ಥೆಯ ಜೊತೆಗೆ IBM System z ವ್ಯವಸ್ಥೆಗಳಿಗಾಗಿ kdump/kexec ಕರ್ನಲ್ ಡಂಪಿಂಗ್ ರಚನಾವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ. ಸ್ವಯಂ-ಕಾದಿರಿಸುವಿಕೆಯ ಮಿತಿಯನ್ನು 4 Gb ಗೆ ಹೊಂದಿಸಲಾಗಿದೆ; ಆದ್ದರಿಂದ, ಯಾವುದೆ 4 GB ಗಿಂತ ಹೆಚ್ಚಿನ ಮೆಮೊರಿಯನ್ನು ಹೊಂದಿರುವ IBM System z ವ್ಯವಸ್ಥೆಗಳಲ್ಲಿ kexec/kdump ರಚನಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗುತ್ತದೆ.
kdump ಅಂದಾಜು 128 MB ಯಷ್ಟು ಮೆಮೊರಿಯನ್ನು ಕಾದಿರಿಸಿಕೊಳ್ಳುವುದರಿಂದ ಸಾಕಷ್ಟು ಮೆಮೊರಿಯು ಲಭ್ಯವಿರಬೇಕಾಗುತ್ತದೆ. ಇದು ಸಾಮಾನ್ಯವಾಗಿ Red Hat Enterprise Linux 6.3 ಕ್ಕೆ ನವೀಕರಿಸುವ ಸಂದರ್ಭದಲ್ಲಿ ಪ್ರಮುಖ ಅಗತ್ಯವಾಗಿರುತ್ತದೆ. ವ್ಯವಸ್ಥೆಯು ಕುಸಿತಗೊಂಡಾಗ ಡಂಪ್ ಅನ್ನು ಶೇಖರಿಸಿ ಇಡಲು ಸಾಕಷ್ಟು ಡಿಸ್ಕ್‍ ಜಾಗವು ಲಭ್ಯವಿರುವುದು ಅತ್ಯಗತ್ಯ. SCSI ಡಿಸ್ಕಿನಲ್ಲಿ kdump ಅನ್ನು ಬೆಂಬಲಿಸುವವರೆಗೆ DASD ಅಥವ QETH ಜಾಲಬಂಧಗಳನ್ನು ಡಂಪ್‌ ಸಾಧನಗಳಾಗಿ Kdump ಮಿತಿಗೊಳಿಸಿತ್ತು.
kdump ಅನ್ನು ಆರಂಭಗೊಳಿಸಿದಾಗ ಈ ಕೆಳಗಿನ ಎಚ್ಚರಿಕೆ ಸಂದೇಶವು ಕಾಣಿಸುತ್ತದೆ:
....ಅಂತಹ ಯಾವುದೆ ಕಡತ ಅಥವ ಕೋಶವು ಕಂಡುಬಂದಿಲ್ಲ
ಈ ಸಂದೇಶವು ಡಂಪ್ ಕಾರ್ಯದ ಮೇಲೆ ಯಾವುದೆ ಪ್ರಭಾವವನ್ನು ಬೀರುವುದಿಲ್ಲ ಮತ್ತು ಇದನ್ನು ಕಡೆಗಣಿಸಬಹುದಾಗಿರುತ್ತದೆ. ನೀವು kdump ಅನ್ನು /etc/kdump.conf, system-config-kdump, ಅಥವ firstboot ಮುಖಾಂತರ ಸಂರಚಿಸಲು ಅಥವ ನಿಷ್ಕ್ರಿಯಗೊಳಿಸಬಹುದಾಗಿರುತ್ತದೆ.
ftrace ಗಾಗಿ ಮಾಡ್ಯೂಲ್-ನಿಲುಕಬಹುದಾದಂತಹ ಸಂಪರ್ಕಸಾಧನ
ftrace ಕಾರ್ಯದ ಟ್ರೇಸರ್ ಈಗ ಮಾಡ್ಯೂಲ್‌ಗಳು ಮತ್ತು ಎಲ್ಲಾ ಬಳಕೆದಾರರಿಗೆ ftrace ಕಾರ್ಯದ ಜಾಡನ್ನು ಇರಿಸುವ ಸವಲತ್ತನ್ನು ಬಳಸಲು ನೆರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮಾಹಿತಿ ಪುಟಗಳನ್ನು ನೋಡಿ:
man trace-cmd-record
man trace-cmd-stack
ಬಹು-ಎಳೆ (ಮಲ್ಟಿ-ತ್ರೆಡ್) ಪ್ರಕ್ರಿಯೆಗಳ ಜಾಡನ್ನು ಇರಿಸುವಿಕೆ
ಒಂದಕ್ಕಿಂತ ಹೆಚ್ಚಿನ ಎಳೆಯನ್ನು ಹೊಂದಿರುವ ಪ್ರಕ್ರಿಯೆಗಳ ಜಾಡನ್ನು ಇರಿಸುವಾಗ, ltrace ಸವಲತ್ತು ಮುಖ್ಯ ಎಳೆಯನ್ನು ಹೊರತುಪಡಿಸಿ ಬೇರೆ ಎಳೆಗಳನ್ನು ಕಡೆಗಣಿಸುತ್ತದೆ. ಎಳೆಗಳು ವಿಳಾಸ ಸ್ಥಳವನ್ನು ಹಂಚಿಕೊಳ್ಳುವುದರಿಂದ, ಈ ಇತರೆ ಎಳೆಗಳಿಗೆ ltrace ಇಂದ ವಿತರಿಸಲಾದ ತಡೆಬಿಂದುಗಳು ಕಾಣಿಸಿಕೊಳ್ಳಬಹುದು. ಪರಿಣಾಮವಾಗಿ, ಒಂದು SIGTRAP ಸಂಕೇತದಿಂದ ಈ ಎಳೆಗಳನ್ನು ಅಂತ್ಯಗೊಳಿಸಲಾಗುತ್ತದೆ. Red Hat Enterprise Linux 6.3 ರಲ್ಲಿ ಎಳೆಯ ಕುರಿತು ತಿಳುವಳಿಕೆ ಮೂಡಿಸುವಿಕೆ ಮತ್ತು ತಡೆಬಿಂದು ನಿಭಾಯಿಸುವ ರಚನಾವ್ಯವಸ್ಥೆಗಳಿಗೆ ಬೆಂಬಲವನ್ನು ಸೇರಿಸಲಾಗಿದೆ. ಬಹು-ಎಳೆಯ ಪ್ರಕ್ರಿಯೆಗಳ ಬೆಂಬಲವು ಈಗ ಏಕ-ಎಳೆ ಪ್ರಕ್ರಿಯೆಕ್ಕೆ ಸಮನಾಗಿರುತ್ತದೆ.
ಕ್ರಾಸ್ ಮೆಮೊರಿ ಅಟ್ಯಾಚ್
ಕ್ರಾಸ್ ಮೆಮೊರಿ ಅಟ್ಯಾಚ್ ಎನ್ನುವುದು ನೋಡ್‌ಗಳ ನಡುವಿನ ಪ್ರಕ್ರಿಯೆಗಳ ನಡುವಿನ ಸಂವಹನಕ್ಕಾಗಿ ಅಗತ್ಯವಿರುವ ದತ್ತಾಂಶ ಪ್ರತಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ನಿಶ್ಚಿತವಾಗಿ ಹೇಳಬೇಕೆಂದರೆ, ನೋಡ್‌ಗಳ ನಡುವಿನ ಸಂವಹನೆಯನ್ನು ನಡೆಸುವ MPI ಲೈಬ್ರರಿಗಳು ಹಂಚಲಾದ ಮೆಮೊರಿಯ ಮೂಲಕ ಸಂದೇಶದ ಎರಡು ಪ್ರತಿ ಮಾಡುವ ಬದಲು ಒಂದೇ ಪ್ರತಿ ಮಾಡಲು ಅನುವು ಮಾಡುತ್ತದೆ. ಈ ತಂತ್ರವನ್ನು ಈ ಮೊದಲು ಅನೇಕ, ವಿಶಿಷ್ಟವಾದ ಚಾಲಕ-ಆಧರಿತ ಅಳವಡಿಕೆಗಳ ಮುಖಾಂತರ ನಿರ್ವಹಿಸಲಾಗುತ್ತಿತ್ತು. Red Hat Enterprise Linux 6.3 ರಲ್ಲಿ ಪರಿಚಯಿಸಲಾದ ಅಳವಡಿಕೆಯು ಈ ಕಾರ್ಯಕ್ಕಾಗಿನ ಒಂದು ಸಾಮಾನ್ಯ ಪರಿಹಾರವನ್ನು ಒದಗಿಸುತ್ತದೆ. ಜೊತೆಗೆ ಮೆಮೊರಿ ವ್ಯವಸ್ಥಾಪನಾ ಉಪವ್ಯವಸ್ಥೆಗೆ ಬದಲಾವಣೆಗಳು ಉಂಟಾದಾಗ, ಈ ಕ್ರಿಯೆಯ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುವ ಸಾಧನ ಚಾಲಕವನ್ನು ನಿರ್ಮಾಣಗಾರರು ತಮ್ಮ ಅಳವಡಿಕೆಗಳಿಗೆ ಯಾವುದೆ ಬದಲಾವಣೆಗಳನ್ನು ಮಾಡುವ ಅಗತ್ಯಬೀಳದ ರೀತಿಯ ಅವಕಾಶಗಳನ್ನು ನೀಡುತ್ತದೆ.
ಎರಡು ಗ್ರಾಫಿಕ್‌ ಕಾರ್ಡುಗಳ ನಡುವೆ ಬದಲಾಯಿಸಲು ಅವಕಾಶವನ್ನು ಒದಗಿಸುತ್ತದೆ
ಎರಡು ಗ್ರಾಫಿಕ್‌ ಕಾರ್ಡುಗಳ ಬದಲಾಯಿಸುವುದನ್ನು ಅನುವು ಮಾಡಿಕೊಡಲು CONFIG_VGA_SWITCHEROO ಸಂರಚನಾ ಆಯ್ಕೆಯನ್ನು ಈಗ ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗಿದೆ.

ಅಧ್ಯಾಯ 2. ಸಾಧನದ ಚಾಲಕಗಳು

BFA ಚಾಲಕಕ್ಕೆ ಸಂಪೂರ್ಣ ಬೆಂಬಲವಿದೆ
Brocade BFA Fibre Channel ಮತ್ತು FCoE ಚಾಲಕಗಳು ಇನ್ನು ಮುಂದೆ ತಂತ್ರಜ್ಞಾನ ಮುನ್ನೋಟವಾಗಿರುವುದಿಲ್ಲ. Red Hat Enterprise Linux 6.3 ರಲ್ಲಿ BFA ಚಾಲಕವು ಸಂಪೂರ್ಣವಾಗಿ ಬೆಂಬಲಿತವಾಗಿರುತ್ತವೆ.
BNA ಚಾಲಕವು ಸಂಪೂರ್ಣವಾಗಿ ಬೆಂಬಲಿತವಾಗಿರುತ್ತದೆ
Brocade 10Gb PCIe ಎತರ್ನೆಟ್‌ ನಿಯಂತ್ರಕಗಳಿಗಾಗಿನ Brocade BNA Fibre Channel ಇನ್ನು ಮುಂದೆ ತಂತ್ರಜ್ಞಾನ ಮುನ್ನೋಟವಾಗಿರುವುದಿಲ್ಲ. Red Hat Enterprise Linux 6.3 ರಲ್ಲಿ BNA ಚಾಲಕವು ಸಂಪೂರ್ಣವಾಗಿ ಬೆಂಬಲಿತವಾಗಿರುತ್ತವೆ.
be2net ಚಾಲಕದಲ್ಲಿ SR-IOV
Emulex be2net ಚಾಲಕದ SR-IOV ಅನ್ನು Red Hat Enterprise Linux 6.3 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ಪರಿಗಣಿಸಲಾಗಿದೆ. ಇತ್ತೀಚಿನ SR-IOV ಬೆಂಬಲವನ್ನು ಬಳಸಲು ನೀವು ಈ ಕೆಳಗಿನ ಅಗತ್ಯತೆಗಳನ್ನು ಪೂರೈಸಬೇಕಾಗುತ್ತದೆ:
  • ನೀವು ಇತ್ತೀಚಿನ Emulex ಫರ್ಮ್-ವೇರ್ ಅನ್ನು ಚಲಾಯಿಸಬೇಕು (4.1.417.0 ಅಥವ ನಂತರದ ಆವೃತ್ತಿ).
  • ಪರಿಚಾರಕಗಣಕ ವ್ಯವಸ್ಥೆಯ BIOS ಯು SR-IOV ಕ್ರಿಯಾಶೀಲತೆಯನ್ನು ಬೆಂಬಲಿಸಬೇಕು ಮತ್ತು ಡೈರೆಕ್ಟ್ I/O VT-d ಗಾಗಿ ವರ್ಚುವಲೈಸೇಶನ್ ಅನ್ನು ಹೊಂದಿರಬೇಕು.
  • ನೀವು Red Hat Enterprise Linux 6.3 ರ GA ಆವೃತ್ತಿಯನ್ನು ಬಳಸಬೇಕು.
SR-IOV ಅನ್ನು be2net ಚಾಲಕ ತಂತ್ರಾಂಶದ ಅಗತ್ಯವಿರುವ BE3-ಆಧರಿತವಾದ ಎಲ್ಲಾ Emulex-branded ಮತ್ತು OEM ವೇರಿಯಂಟ್‌ಗಳಲ್ಲಿ ಚಲಾಯಿಸಬಹುದಾಗಿರುತ್ತದೆ.
ಶೇಖರಣಾ ಚಾಲಕಗಳು
  • Red Hat Enterprise Linux 6.3 ರಲ್ಲಿ ಮೈಕ್ರಾನ್ RealSSD P320h PCIe SSD ಚಾಲಕಗಳನ್ನು ಬೆಂಬಲಿಸುವ mtip32xx ಗೆ ಬೆಂಬಲವನ್ನು ಸೇರಿಸಲಾಗಿದೆ.
  • ಎಮುಲೆಕ್ಸ್ ಫೈಬರ್ ಚಾನಲ್ ಹೋಸ್ಟ್‍ ಬಸ್‌ ಅಡಾಪ್ಟರುಗಳಗಾಗಿನ Ipfc ಚಾಲಕವನ್ನು ಆವೃತ್ತಿ 8.3.5.68.2p ಗೆ ಅಪ್‌ಡೇಟ್ ಮಾಡಲಾಗಿದೆ.
  • mptfusion ಚಾಲಕವನ್ನು ಆವೃತ್ತಿ 3.04.20 ಗೆ ಅಪ್‌ಡೇಟ್ ಮಾಡಲಾಗಿದೆ.
  • Broadcom Netxtreme II 57712 ಚಿಪ್‌ಗಾಗಿನ bnx2fc ಅನ್ನು ಆವೃತ್ತಿ 1.0.11 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • QLogic Fibre Channel HBAಗಳಿಗಾಗಿನ qla2xxx ಚಾಲಕವನ್ನು ಆವೃತ್ತಿ 8.04.00.02.06.3-k ಗೆ ಅಪ್‌ಡೇಟ್ ಮಾಡಲಾಗಿದೆ. Red Hat Enterprise Linux 6.3 ಕ್ಕಾಗಿನ qla2xxx ಚಾಲಕ ಅಪ್‌ಡೇಟ್‌ನಿಂದಾಗಿ ಈಗ SCSI ಮಧ್ಯ-ಪದರವು ನಿರ್ದೇಶಿತ ಸಂಪರ್ಕಸ್ಥಾನದಿಂದ ಬಂದ ಸರತಿ-ಭರ್ತಿಯಾಗಿದೆ ಎನ್ನುವ ಸ್ಥಿತಿ ಸಂದೇಶಗಳನ್ನು ನಿಭಾಯಿಸುವ ಸಾಮಾನ್ಯ ಸಂಕೇತದ ಪ್ರಯೋಜನವನ್ನು ಇದು ಪಡೆದುಕೊಳ್ಳುತ್ತದೆ. ಈ ಮೊದಲು, ಈ ಸಂಕೇತವು qla2xxx ಚಾಲಕದ ಒಳಗೆಯೆ ಇರುತ್ತಿತ್ತು. API ಹೊಂದಾಣಿಕೆಯನ್ನು ಕಾಪಾಡಿಕೊಳ್ಳಲು, ql2xqfulltracking ಮತ್ತು ql2xqfullrampup ಮಾಡ್ಯೂಲ್ ನಿಯತಾಂಕಗಳಿಗಾಗಿನ ತುಣುಕುಗಳನ್ನು ಚಾಲಕದಲ್ಲಿಯೆ ಇರಲು ಬಿಡಲಾಗಿದೆ.
    ಇದರ ಜೊತೆಗೆ, ಈ ಅಪ್‌ಡೇಟ್ ISP82xx ಮತ್ತು ISP83xx ಗಾಗಿ ಬೆಂಬಲವನ್ನು ಸೇರಿಸುತ್ತದೆ ಮತ್ತು ಡೈನಮಿಕ್ ಲಾಗಿಂಗ್ ಕ್ರಿಯಾಶೀಲತೆಯನ್ನು ಸೇರಿಸುತ್ತದೆ.
  • qla4xxxx ಅನ್ನು ಆವೃತ್ತಿ 5.02.00.00.06.03-k1 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು port_state, port_speed, ಮತ್ತು targetalias ಅನ್ನು sysfs ಕಡತವ್ಯವಸ್ಥೆಯಲ್ಲಿ ತೋರಿಸುವುದನ್ನು ಬೆಂಬಲಿಸುತ್ತದೆ.
  • The megaraid ಚಾಲಕವನ್ನು ಆವೃತ್ತಿ 00.00.06.14-rh1ಗೆ ಅಪ್‌ಡೇಟ್ ಮಾಡಲಾಗಿದೆ.
  • IBM Power Linux RAID SCSI HBAಗಳಿಗಾಗಿನ ipr ಚಾಲಕವನ್ನು SAS VRAID ಕ್ರಿಯೆಗಳನ್ನು ಸಕ್ರಿಯಗೊಳಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • kdump ಬ್ಲಾಕ್‌ಲಿಸ್ಟಿಗೆ ನಿಯಂತ್ರಕಗಳನ್ನು ಸೇರಿಸುವಂತೆ cciss ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • hpsa ಚಾಲಕವನ್ನು ಆವೃತ್ತಿ 2.0.2-4 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು kdump ಬ್ಲಾಕ್‌ಲಿಸ್ಟಿಗೆ ನಿಯಂತ್ರಕಗಳನ್ನು ಸೇರಿಸುತ್ತದೆ.
  • ಬ್ರಾಡ್‌ಕಾಮ್‌ NetXtreme II iSCSI ಗಾಗಿನ bnx2i ಚಾಲಕವನ್ನು ಆವೃತ್ತಿ 2.7.2.1 ಗೆ ಅಪ್‌ಡೇಟ್ ಮಾಡಲಾಗಿದೆ.
  • mpt2sas ಚಾಲಕವನ್ನು ಆವೃತ್ತಿ 12.101.00.00 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು HBA ಗಾಗಿ ಬಹು-ಪ್ರತಿಕ್ರಿಯೆ ಸರತಿಯ ಬೆಂಬಲವನ್ನು ಬಳಸುವ NUNA I/O ಬೆಂಬಲವನ್ನು ಸೇರಿಸುತ್ತದೆ.
  • mptsas ಚಾಲಕವನ್ನು ಈ ಚಾಲಕ ID ಯನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ: SAS1068_820XELP
  • Brocade BFA FC SCSI ಚಾಲಕವನ್ನು (bfa ಚಾಲಕ) ಅಪ್‌ಡೇಟ್ ಮಾಡಲಾಗಿದೆ.
  • ServerEngines BladeEngine 2 Open iSCSI ಸಾಧನಗಳಿಗಾಗಿನ be2iscsi ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ahci.c ಚಾಲಕವನ್ನು Intel DH89xxCC PCH ಗಾಗಿ AHCI-mode SATA DeviceID ಅನ್ನು ಸೇರಿಸುವಂತೆ ಅಪ್‌ಡೇಟ್‌ ಮಾಡಲಾಗಿದೆ.
  • isci ಚಾಲಕವನ್ನು ಆವೃತ್ತಿ 1.1 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಇತ್ತೀಚಿನ to pick up the latest Intel ಯಂತ್ರಾಂಶ ಬೆಂಬಲ, ಸುಧಾರಣೆಗಳು ಮತ್ತು ದೋಷ ಪರಿಹಾರಗಳನ್ನು ಒದಗಿಸುತ್ತದೆ.
  • isci sata ಚಾಲಕವನ್ನು T10 DIF ಬೆಂಬಲವನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • libfc, libfcoe, ಹಾಗು fcoe ಚಾಲಕಗಳನ್ನು ಹಲವಾರು ದೋಷ ಪರಿಹಾರಗಳು ಮತ್ತು ಸುಧಾರಣೆಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ.
  • libsas ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • TrueScale HCAಗಳಿಗಾಗಿನ qib ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ಹಲವಾರು ದೋಷಗಳನ್ನು ಪರಿಹರಿಸುವ ಸಲುವಾಗಿ libata ಮಾಡ್ಯೂಲ್‌ ಅನ್ನು ಅಪ್‌ಡೇಟ್ ಮಾಡಲಾಗಿದೆ.
  • mdಚಾಲಕದ dm-raid ಸಂಕೇತವನ್ನು ಅಪ್‌ಡೇಟ್ ಮಾಡಲಾಗಿದೆ.
  • ಈ ಕೆಳಗಿನ ಚಾಲಕಗಳನ್ನು ಇತ್ತೀಚಿನ ಒಂದು ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ: ahci, md/bitmap, raid0, raid1, raid10, ಮತ್ತು raid456.
  • aacraid ಚಾಲಕವನ್ನು ಆವೃತ್ತಿ 1.1-7[28000] ಗೆ ಅಪ್‌ಡೇಟ್ ಮಾಡಲಾಗಿದೆ.
ಜಾಲಬಂಧ ಚಾಲಕಗಳು
  • NetXen ಮಲ್ಟಿ ಪೋರ್ಟ್ (1/10) ಗಿಗಾಬಿಟ್ ನೆಟ್‌ವರ್ಕ್ ಸಾಧನಗಳಿಗಾಗಿನ netxen ಚಾಲಕವನ್ನು 4.0.77 ಅಥವ ನಂತರದ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • bnx2x ಚಾಲಕವನ್ನು ಆವೃತ್ತಿ 7.2.16 ಗೆ ಅಪ್‌ಡೇಟ್ ಮಾಡಲಾಗಿದ್ದು ಇದು 578xx ಗುಂಪಿನ ಚಿಪ್‌ಗಳನ್ನು ಬೆಂಬಲಿಸುತ್ತದೆ.
  • ServerEngines BladeEngine 2 Open iSCSI ಜಾಲಬಂಧ ಸಾಧನಗಳಿಗಾಗಿನ be2net ಚಾಲಕವನ್ನು ಆವೃತ್ತಿ 4.2.5.0r ಗೆ ಅಪ್‌ಡೇಟ್ ಮಾಡಲಾಗಿದೆ.
  • ixgbef ಚಾಲಕವನ್ನು ಆವೃತ್ತಿ 2.2.0-k ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಇತ್ತೀಚಿನ ಯಂತ್ರಾಂಶ ಬೆಂಬಲವನ್ನು ಒದಗಿಸುತ್ತದೆ.
  • ಚೆಲ್ಸಿಯೊ ಟರ್ಮಿನೇಟರ್4 10G ಯೂನಿಫೈಡ್ ವೈರ್ ನೆಟ್‌ವರ್ಕ್ ನಿಯಂತ್ರಕಗಳಿಗಾಗಿನ cxgb4 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ಚೆಲ್ಸಿಯೊ T3 ಕುಟುಂಬದ ನೆಟ್‌ವರ್ಕ್ ಸಾಧನಗಳಿಗಾಗಿನ cxgb3 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • Intel 10 Gigabit PCI Express ಜಾಲಬಂಧ ಸಾಧನಗಳಿಗಾಗಿನ ixgbe ಚಾಲಕವನ್ನು ಆವೃತ್ತಿ 3.6.7-k ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಇತ್ತೀಚಿನ ಯಂತ್ರಾಂಶ ಬೆಂಬಲ, ಸುಧಾರಣೆಗಳು ಮತ್ತು ದೋಷ ಪರಿಹಾರಗಳನ್ನು ಹೊಂದಿರುತ್ತದೆ.
  • Intel PRO/1000 ಜಾಲಬಂಧ ಸಾಧನಗಳಿಗಾಗಿ e1000e ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • Intel PRO/1000 ಜಾಲಬಂಧ ಸಾಧನಗಳಿಗಾಗಿ e1000e ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • e100 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • Cisco 10G ಎತರ್ನೆಟ್ ಸಾಧನಕ್ಕಾಗಿನ enic ಆವೃತ್ತಿಯನ್ನು 2.1.1.35ಕ್ಕೆ ಅಪ್‌ಡೇಟ್ ಮಾಡಲಾಗಿದ್ದು, ಇದು SR-IOV ಬೆಂಬಲವನ್ನು ಸೇರಿಸುತ್ತದೆ.
  • igbvf ಚಾಲಕವನ್ನು (Intel Gigabit Virtual Function Network ಚಾಲಕ) ಆವೃತ್ತಿ 2.0.1-k ಗೆ ಅಪ್‌ಡೇಟ್ ಮಾಡಲಾಗಿದೆ.
  • Intel Gigabit ಎತರ್ನೆಟ್‌ ಅಡಾಪ್ಟರುಗಳಿಗಾಗಿನ ixgbe ಚಾಲಕವನ್ನು ಆವೃತ್ತಿ 3.2.10-k ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಇತ್ತೀಚಿನ ಯಂತ್ರಾಂಶ ಬೆಂಬಲ, ಸುಧಾರಣೆಗಳು ಮತ್ತು ದೋಷ ಪರಿಹಾರಗಳನ್ನು ಹೊಂದಿರುತ್ತದೆ.
  • ಬ್ರಾಡ್‌ಕಾಮ್‌ NetXtreme II 1 ಗಿಗಾಬಿಟ್‌ ಎತರ್ನೆಟ್‌ ನಿಯಂತ್ರಕಗಳಿಗಾಗಿನ bnx2 ಚಾಲಕವನ್ನು ಆವೃತ್ತಿ 1.0.11ಗೆ ಅಪ್‌ಡೇಟ್ ಮಾಡಲಾಗಿದೆ.
  • Broadcom Tigon3 ಎತರ್ನೆಟ್ ಸಾಧನಗಳಿಗಾಗಿನ tg3 ಚಾಲಕವನ್ನು ಆವೃತ್ತಿ 3.120+ ಗೆ ಅಪ್‌ಡೇಟ್ ಮಾಡಲಾಗಿದೆ. .
  • HP NC-ಸೀರೀಸ್ ಕ್ಯುಲಾಜಿಕ್ 10 ಗಿಗಾಬಿಟ್ ಸರ್ವರ್ ಅಡಾಪ್ಟರ್ಸ್ ಸಾಧನಕ್ಕಾಗಿನ qlcnic ಆವೃತ್ತಿಯನ್ನು 5.0.26 ಗೆಅಪ್‌ಡೇಟ್ ಮಾಡಲಾಗಿದೆ.
  • bna ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • r8169 ಚಾಲಕವನ್ನು ಇತ್ತೀಚಿನ Realtek NICಗಳಿಗೆ (8168D/8168DP/8168E/8168EV) ಬೆಂಬಲವನ್ನು ಸೇರಿಸುವಂತೆ ಮತ್ತು ಹಳೆಯ NICಗಳಲ್ಲಿ ವಿಶ್ವಾಸರ್ಹತೆ ಹೆಚ್ಚುವಂತೆ ಅಪ್‌ಡೇಟ್ ಮಾಡಲಾಗಿದೆ.
  • qlge ಚಾಲಕವನ್ನು ಆವೃತ್ತಿ v1.00.00.30 ಗೆ ಅಪ್‌ಡೇಟ್ ಮಾಡಲಾಗಿದೆ.
  • cnic ಚಾಲಕವನ್ನು ಆವೃತ್ತಿ 2.5.9 ಗೆ ಅಪ್‌ಡೇಟ್ ಮಾಡಲಾಗಿದ್ದು, bnx2x ಸಾಧನಗಳಲ್ಲಿ ಮರುಸ್ಥಾಪನೆಯನ್ನು ಸುಧಾರಿಸುತ್ತದೆ, FCoE ಪ್ಯಾರಿಟಿ ದೋಷದ ಸರಿಪಡಿಸುತ್ತದೆ,FCoE ಅಧಿವೇಶನಗಳ ಗರಿಷ್ಟ ಸಮಯವನ್ನು ಹೆಚ್ಚಿಸುತ್ತದೆ, ಮತ್ತು ಇತರೆ ಸುಧಾರಣೆಗಳನ್ನು ಸೇರಿಸುತ್ತದೆ.
  • iwl6000 ಮತ್ತು iwlwifi ಚಾಲಕಗಳನ್ನು Intel Centrino Wireless-N 6235 ಸರಳಿಯ Wi-Fi ಅಡಾಪ್ಟರುಗಳನ್ನು ಬೆಂಬಲಿಸುವಂತೆ ಅಪ್‌ಡೇಟ್ ಮಾಡಲಾಗಿದೆ. 5GHz ಬ್ಯಾಂಡನ್ನು ನಿಷ್ಕ್ರಿಯಗೊಳಿಸುವ ಒಂದು ಆಯ್ಕೆಯನ್ನೂ ಸಹ iwlwifi ಸೇರಿಸುತ್ತದೆ.
  • ವೈರ್ಲೆಸ್‌ LAN ಉಪವ್ಯವಸ್ಥೆಯನ್ನು ಅಪ್‌ಡೇಟ್ ಮಾಡಲಾಗಿದೆ. ಇದು dma_unmap ಸ್ಥಿತಿ API ಅನ್ನು ಪರಿಚಯಿಸುತ್ತದೆ ಮತ್ತು ಹೊಸ ಕರ್ನಲ್ ಹೆಡರ್ ಕಡತವನ್ನು ಸೇರಿಸುತ್ತದೆ: include/linux/pci-dma.h.
ವಿವಿಧ ಚಾಲಕಗಳು
  • i915 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ಆವೃತ್ತಿ 3.3-rc2 ಗೆ ರಿಬೇಸ್‌ ಮಾಡಲಾದ DRM ಬೆಂಬಲದೊಂದಿಗೆ ಹಲವಾರು ಚಿತ್ರಾತ್ಮಕ ಚಾಲಕಗಳನ್ನು ಅಪ್‌ಡೇಟ್ ಮಾಡಲಾಗಿದೆ.
  • Wacom ಚಾಲಕವನ್ನು ಅಪ್‌ಡೇಟ್ ಮಾಡಲಾಗಿದ್ದು, ಇದು wacompl ಪ್ಯಾಕೇಜು ಮತ್ತು wdaemon ಪ್ಯಾಕೇಜನ್ನು ತೆಗೆದುಹಾಕಲಾಗಿದೆ.
  • ALSA HDA ಆಡಿಯೊ ಚಾಲಕವನ್ನು ಹೊಸ ಚಿಪ್‌ಸೆಟ್‌ಗಳು ಹಾಗು HDA ಆಡಿಯೊ ಕೊಡೆಕ್‌ಗಳಿಗಾಗಿನ ಬೆಂಬಲವನ್ನು ನೀಡುವಂತೆ ಅಥವ ಸುಧಾರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • ಬ್ರಾಡ್‌ಕಾಮ್ BCM20702A0 ಸಿಂಗಲ್-ಚಿಪ್ ಬ್ಲೂಟೂತ್ ಸಂಸ್ಕಾರಕಕ್ಕೆ ಬೆಂಬಲಿಸುವಂತೆ btusb ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • AMD ಗುಂಪಿನ CPUಗಳ 12h/14h/15h ಗೆ ಬೆಂಬಲವನ್ನು ಒದಗಿಸುವಂತೆ hwmon ಉಪವ್ಯವಸ್ಥೆಯಲ್ಲಿನ k10temp ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ALPS ಟಚ್‌ಪ್ಯಾಡ್ ಪ್ರೊಟೊಕಾಲ್ ಆವೃತ್ತಿ 3 ಮತ್ತು 4 ಕ್ಕೆ ಮತ್ತು 4-ದಿಕ್ಕಿನ ಗುಂಡಿಗಳಿಗಾಗಿ ಬೆಂಬಲವನ್ನು ಸೇರಿಸುವಂತೆ ALPS ಟಚ್‌ಪ್ಯಾಡ್ ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ಎನ್‌ಹ್ಯಾನ್ಸಡ್ ಎರರ್ ಹ್ಯಾಂಡ್ಲಿಂಗ್‌ಗೆ (EEH) ಬೆಂಬಲವನ್ನು ಸೇರಿಸುವಂತೆ jsm ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • mlx4_en ಚಾಲಕವನ್ನು ಆವೃತ್ತಿ 2.0 ಗೆ ಅಪ್‌ಡೇಟ್ ಮಾಡಲಾಗಿದೆ.
  • mlx4_core ಚಾಲಕವನ್ನು ಆವೃತ್ತಿ 1.1 ಕ್ಕೆ ಅಪ್‌ಡೇಟ್ ಮಾಡಲಾಗಿದೆ. .

ಅಧ್ಯಾಯ 3. ಜಾಲಬಂಧ

QFQ ಸರತಿ ನಿಲ್ಲುವಿಕೆಯ ಶಿಸ್ತು
Red Hat Enterprise Linux 6.3 ರಲ್ಲಿ, tc ಸವಲತ್ತನ್ನು Quick Fair Scheduler (QFQ) ಕರ್ನಲ್ ಸವಲತ್ತುಗಳೊಂದಿಗೆ ಕೆಲಸ ಮಾಡುವಂತೆ ಅಪ್‌ಡೇಟ್ ಮಾಡಲಾಗಿದೆ. ಬಳಕೆದಾರರು ಈಗ ಹೊಸ ಬಳಕೆದಾರಸ್ಥಳದಿಂದ ಹೊಸ QFQ ಸಂಚಾರ ಸರತಿ ಶಿಸ್ತಿನ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಿರುತ್ತದೆ. ಈ ಸವಲತ್ತನ್ನು ತಂತ್ರಜ್ಞಾನ ಮುನ್ನೋಟವಾಗಿ ಪರಿಗಣಿಸಲಾಗಿದೆ.
rdma_bw ಮತ್ತು rdma_last ಸವಲತ್ತುಗಳನ್ನು ತೆಗೆದುಹಾಕಲಾಗಿದೆ
rdma_bw ಮತ್ತು rdma_lat ಸವಲತ್ತುಗಳನ್ನು (perftest ಪ್ಯಾಕೇಜಿನಿಂದ ಒದಗಿಸಲಾಗುತ್ತದೆ) ಈಗ ತೆಗೆದುಹಾಕಲಾಗಿದ್ದು ಮತ್ತು ಮುಂದಿನ ಅಪ್‌ಡೇಟ್‌ಗಳಲ್ಲಿ perftest ಪ್ಯಾಕೇಜಿನಿಂದ ಕೈಬಿಡಲಾಗುತ್ತದೆ. ಬಳಕೆದಾರರು ಇದರ ಬದಲಿಗೆ ಈ ಕೆಳಗಿನಸೌಲಭ್ಯಗಳನ್ನು ಬಳಸಬೇಕು: ib_write_bw, ib_write_lat, ib_read_bw, ಮತ್ತು ib_read_lat.

ಅಧ್ಯಾಯ 4. ಸಂಪನ್ಮೂಲ ವ್ಯವಸ್ಥಾಪನೆ

ಜಾಲಬಂಧ ಆದ್ಯತೆ cgroup ಸಂಪನ್ಮೂಲ ನಿಯಂತ್ರಕ
Red Hat Enterprise Linux 6.3 ರಲ್ಲಿ ಜಾಲಬಂಧ ಆದ್ಯತೆ (net_prio) ಸಂಪನ್ಮೂಲ ನಿಯಂತ್ರಕವನ್ನು ಪರಿಚಯಿಸಲಾಗಿದ್ದು, ಇದು ಹಲವಾರು cgroups ನ ಒಳಗಿನ ಅನ್ವಯಗಳಲ್ಲಿನ ಪ್ರತಿಯೊಂದು ಜಾಲಬಂಧ ಸಂಪರ್ಕಸಾಧನಕ್ಕಾಗಿ ಜಾಲಬಂಧ ಸಂಚಾರದ ಆದ್ಯತೆಯನ್ನು ಕ್ರಿಯಾತ್ಮಕವಾಗಿ ಹೊಂದಿಸಲು ಅವಕಾಶವನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, Resource Management Guide ಅನ್ನು ನೋಡಿ.
cgroups ಗಾಗಿ OOM ನಿಯಂತ್ರಣ ಮತ್ತು API ಸೂಚನೆ
ಹೊಸ ಸೂಚನಾ API ಅನ್ನು ಬಳಸುವ ಔಟ್-ಆಫ್-ಮೆಮೊರಿ (OOM) ಸೂಚಕವನ್ನು ಮೆಮೊರಿ ಸಂಪನ್ಮೂಲ ನಿಯಂತ್ರಣವು ಅಳವಡಿಸುತ್ತದೆ. ಇದನ್ನು ಸಕ್ರಿಯಗೊಳಿಸಿದಾಗ (echo 1 > memory.oom_control ಎಂಬ ಆಜ್ಞೆಯ ಮುಖಾಂತರ), OOM ಸಂಭವಿಸಿದಲ್ಲಿ, eventfd ಮೂಲಕ ಒಂದು ಅನ್ವಯವನ್ನು ಸೂಚಿಸಲಾಗುತ್ತದೆ. OOM ಸೂಚನೆಯು root cgroups ಗಾಗಿ ಕಾರ್ಯನಿರ್ವಹಿಸುವುದಿಲ್ಲ ಎನ್ನುವುದನ್ನು ನೆನಪಿಡಿ.
ಹೊಸ numad ಪ್ಯಾಕೇಜುಗಳು
numad ಎನ್ನುವ ಪ್ಯಾಕೇಜು NUMA ಅಕ್ಷರಗಳ ಕುರಿತಾದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತಹ NUMA ಗಾಗಿ (ನಾನ್-ಯುನಿಫಾರ್ಮ್ ಮೆಮೊರಿ ಆರ್ಕಿಟೆಕ್ಚರ್) ಡೀಮನ್ ಅನ್ನು ಒದಗಿಸುತ್ತದೆ. ಮ್ಯಾನುವಲ್ ಸ್ಥಿರ CPU ಪಿನ್ನಿಂಗ್ ಮತ್ತು ಮೆಮೊರಿ ನಿಯೋಜನೆಗೆ ಒಂದು ಪರ್ಯಾಯ ಮಾರ್ಗವಾಗಿ, numad ಮೆಮೊರಿ ಸುಪ್ತವಾಗುವಿಕೆಯು ಜರುಗುತ್ತಿರುವ ಆಧಾರದಲ್ಲಿ ಕಡಿಮೆ ಮಾಡಲು ಕ್ರಿಯಾತ್ಮಕವಾಗಿ ಮಾರ್ಪಡಿಸುವಿಕೆಗೆ ಅವಕಾಶವನ್ನು ಒದಗಿಸುತ್ತದೆ. ಈ ಪ್ಯಾಕೇಜು ಒಂದು ಅನ್ವಯವನ್ನು ಅತ್ಯುತ್ತಮವಾಗಿ ಕೈಯಾರೆ ಇರಿಸುವಿಕೆಗಾಗಿ numad ಡೀಮನ್ ಅನ್ನು ಮನವಿ ಮಾಡಲು ಒಂದು ಸಂಪರ್ಕಸಾಧನವನ್ನೂ ಸಹ ಒದಗಿಸುತ್ತೆ. numad ಪ್ಯಾಕೇಜನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಪರಿಚಯಿಸಲಾಗಿದೆ.

ಅಧ್ಯಾಯ 5. ದೃಢೀಕರಣ ಹಾಗು ಇಂಟರ್ಪೊಲೆಬಿಲಿಟಿ

SSH ಕೀಲಿಗಳ ಕೇಂದ್ರೀಕೃತ ನಿರ್ವಹಣೆಯನ್ನು ಬೆಂಬಲಿಸುತ್ತದೆ
ಈ ಹಿಂದೆ, ಆತಿಥೇಯ ಮತ್ತು ಬಳಕೆದಾರರ SSH ಸಾರ್ವಜನಿಕ ಕೀಲಿಗಳನ್ನು ಒಂದು ಕೇಂದ್ರೀಕೃತ ವ್ಯವಸ್ಥೆಯಲ್ಲಿ ನೋಡಿಕೊಳ್ಳುವುದು ಅಸಾಧ್ಯವಾಗಿತ್ತು. Red Hat Enterprise Linux 6.3 ರಲ್ಲಿ ಗುರುತು ನಿರ್ವಹಣಾ ಪರಿಚಾರಕಗಳಿಗಾಗಿ SSH ಸಾರ್ವಜನಿಕ ಕೀಲಿ ನಿರ್ವಹಣೆಯನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ. ಗುರುತು ನಿರ್ವಹಣಾ ಪರಿಚಾರಕದಲ್ಲಿ ಶೇಖರಿಸಿಡಲಾದ ಸಾರ್ವಜನಿಕ ಕೀಲಿಗಳನ್ನು ಬಳಸುವಂತೆ ಗುರುತು ನಿರ್ವಹಣಾ ಕ್ಲೈಂಟ್‌ಗಳಲ್ಲಿನ OpenSSH ಈಗ ಸ್ವಯಂಚಾಲಿತವಾಗಿ ಸಂರಚಿಸಲಾಗಿರುತ್ತದೆ. SSH ಆತಿಥೇಯ ಮತ್ತು ಬಳಕೆದಾರರ ಗುರುತುಗಳನ್ನು ಈಗ ಗುರುತು ನಿರ್ವಹಣೆಯ ಕೇಂದ್ರೀಕೃತ ವ್ಯವಸ್ಥೆಯಲ್ಲಿ ನೋಡಿಕೊಳ್ಳಬಹುದಾಗಿದೆ.
SELinux ಬಳಕೆದಾರ ಮ್ಯಾಪಿಂಗ್
Red Hat Enterprise Linux 6.3 ರಲ್ಲಿ, ದೂರಸ್ಥ ವ್ಯವಸ್ಥೆಯಲ್ಲಿನ ಬಳಕೆದಾರರ SELinux ಸನ್ನಿವೇಶಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಪರಿಚಯಿಸಲಾಗಿದೆ. SELinux ಬಳಕೆದಾರ ನಕ್ಷೆಯ ನಿಯಮಗಳನ್ನು ವಿವರಿಸಲು ಸಾಧ್ಯವಿರುತ್ತದೆ ಮತ್ತು ಅಗತ್ಯವಿದ್ದಲ್ಲಿ, HBAC ನಿಯಮಗಳೊಂದಿಗೆ ಜೋಡಿಸಬಹುದಾಗಿರುತ್ತದೆ. ಈ ಮ್ಯಾಪ್‌ಗಳು ಬಳಕೆದಾರರು ಪ್ರವೇಶಿಸುವ ಆತಿಥೇಯ ಮತ್ತು ಗುಂಪಿನ ಸದಸ್ಯತ್ವಕ್ಕೆ ಅನುಗುಣವಾಗಿ ಈ ಮ್ಯಾಪ್‌ಗಳು ಬಳಕೆದಾರರು ಸ್ವೀಕರಿಸುವ ಸನ್ನಿವೇಶವನ್ನು ವಿವರಿಸುತ್ತವೆ. ಬಳಕೆದಾರರು, ಗುರುತು ನಿರ್ವಹಣಾ ಬ್ಯಾಕೆಂಡನ್ನು ಹೊಂದಿರುವ SSSD ಅನ್ನು ಬಳಸುವಂತೆ ಸಂರಚಿಸಲಾದ ದೂರಸ್ಥ ಆತಿಥೇಯಗಣಕಕ್ಕೆ ಪ್ರವೇಶಿಸಿದಾಗ, ಬಳಕೆದಾರರ SELinux ಸನ್ನಿವೇಶವನ್ನು ಆ ಬಳಕೆದಾರನಿಗಾಗಿ ಸೂಚಿಸಲಾದ ಮ್ಯಾಪಿಂಗ್ ನಿಯಮಗಳ ಅನುಗುಣವಾಗಿ ಸ್ವಯಂಚಾಲಿತವಾಗಿ ಹೊಂದಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, http://freeipa.org/page/SELinux_user_mapping ಅನ್ನು ನೋಡಿ. ಈ ಸವಲತ್ತನ್ನು ತಂತ್ರಜ್ಞಾನ ಮುನ್ನೋಟವಾಗಿ ಪರಿಗಣಿಸಲಾಗಿದೆ.
sshd ಗಾಗಿ ಅಗತ್ಯವಿರುವ ಅನೇಕ ದೃಢೀಕರಣ ವಿಧಾನಗಳು
SSH ಅನ್ನು ಈಗ ಅನೇಕ ಬಗೆಯ ದೃಢೀಕರಣವನ್ನು ನಡೆಸುವಂತೆ ಸಿದ್ಧಗೊಳಿಸಲಾಗಿದೆ (ಈ ಹಿಂದೆ ಅನೇಕ ಬಗೆಯ SSH ದೃಢೀಕರಣವನ್ನು ಅನುಮತಿಸಲಾಗುತ್ತಿತ್ತು ಆದರೆ ಯಶಸ್ವಿ ಪ್ರವೇಶಕ್ಕೆ ಅವುಗಳಲ್ಲಿ ಕೇವಲ ಒಂದರ ಅಗತ್ಯವಿರುತ್ತಿತ್ತು); ಉದಾಹರಣೆಗೆ, logging in to an SSH-ಸಕ್ರಿಯಗೊಂಡ ಗಣಕಕ್ಕೆ ಪ್ರವೇಶಿಸಲು ಗುಪ್ತವಾಕ್ಯಾಂಶ ಮತ್ತು ಸಾರ್ವಜನಿಕ ಕೀಲಿ ಎರಡನ್ನೂ ನಮೂದಿಸುವ ಅಗತ್ಯವಿರುತ್ತದೆ. ಯಶಸ್ವಿ ಪ್ರವೇಶಕ್ಕೆ ಅಗತ್ಯವಿರುವ ದೃಢೀಕರಣಗಳನ್ನು ಸೂಚಿಸಲು RequiredAuthentications1 ಮತ್ತು RequiredAuthentications2 ಆಯ್ಕೆಗಳನ್ನು /etc/ssh/sshd_config ಕಡತದಲ್ಲಿ ಸಂರಚಿಸಬಹುದಾಗಿರುತ್ತದೆ. ಉದಾಹರಣೆಗೆ:
~]# echo "RequiredAuthentications2 publickey,password" >> /etc/ssh/sshd_config
ಮೇಲೆ ತಿಳಿಸಿದ /etc/ssh/sshd_config ಆಯ್ಕೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, sshd_config ಮಾಹಿತಿಪುಟವನ್ನು ನೋಡಿ.
ಸ್ವಯಂಆರೋಹಣಾ ಮ್ಯಾಪ್‌ ಕ್ಯಾಶಿಂಗ್‌ಗಾಗಿ SSSD ಬೆಂಬಲ
Red Hat Enterprise Linux 6.3 ರಲ್ಲಿ, SSSD ಯು ಒಂದು ತಂತ್ರಜ್ಞಾನ ಮುನ್ನೋಟ ಸವಲತ್ತನ್ನು ಹೊಂದಿದೆ: ಸ್ವಯಂಆರೋಹಣಾ ಮ್ಯಾಪ್‌ ಕ್ಯಾಶಿಂಗ್‌ಗಾಗಿ SSSD ಬೆಂಬಲ. ಇದು autofsನೊಂದಿಗೆ ಕಾರ್ಯನಿರ್ವಹಿಸುವ ಪರಿಸರಗಳಲ್ಲಿ ಹಲವಾರು ಪ್ರಯೋಜನಗಳನ್ನು ನೀಡುತ್ತದೆ:
  • ಕ್ಯಾಶ್ ಮಾಡಲಾದ ಸ್ವಯಂಆರೋಹಿಸಲಾದ ನಕ್ಷೆಗಳಿಂದಾಗಿ, LDAP ಪರಿಚಾರಕಗಣಕಗಳನ್ನು ತಲುಪಲು ಸಾಧ್ಯವಿರದೆ ಇದ್ದು ಆದರೆ NFS ಪರಿಚಾರಕವು ಎಟುಕುವಂತಿದ್ದಲ್ಲಿ, ಕ್ಲೈಂಟ್ ಗಣಕಗಳು ಆರೋಹಣಾ ಕಾರ್ಯಗಳನ್ನು ನಿರ್ವಹಿಸಲು ಸುಲಭವಾಗುತ್ತದೆ.
  • autofs ಡೀಮನ್ ಅನ್ನು SSSD ಮುಖಾಂತರ ಸ್ವಯಂಆರೋಹಣಾ ನಕ್ಷೆಗಳನ್ನು ನೋಡಲು ಸಂರಚಿಸಲಾಗಿದ್ದರೆ, ಕೇವಲ ಒಂದು ಕಡತವನ್ನು ಮಾತ್ರ ಸಂರಚಿಸಬೇಕಾಗುತ್ತದೆ: /etc/sssd/sssd.conf. ಈ ಹಿಂದೆ, autofs ದತ್ತಾಂಶವನ್ನು ಪಡೆಯಲು /etc/sysconfig/autofs ಕಡತವನ್ನು ಸಂರಚಿಸಬೇಕಾಗುತ್ತಿತ್ತು.
  • ಸ್ವಯಂಆರೋಹಣಾ ನಕ್ಷೆಗಳನ್ನು ಕ್ಯಾಶ್ ಮಾಡುವುದರಿಂದ ಕ್ಲೈಂಟ್‌ನ ಕಾರ್ಯನಿರ್ವಹಣೆಯಲ್ಲಿ ವೇಗ ಮತ್ತು LDAP ಪರಿಚಾರಕಗಣಕದಲ್ಲಿ ಕಡಿಮೆ ದಟ್ಟಣಿಗೆ ಕಾರಣವಾಗುತ್ತದೆ.
SSSD debug_level ವರ್ತನೆಯಲ್ಲಿ ವ್ಯತ್ಯಾಸ
SSSDಯು /etc/sssd/sssd.conf ಕಡತದಲ್ಲಿ debug_level ಆಯ್ಕೆಯ ವರ್ತನೆಯನ್ನು ಬದಲಿಸಿದೆ. ಈ ಹಿಂದೆ, [sssd] ಸಂರಚನೆಯ ವಿಭಾಗದಲ್ಲಿ debug_level ಆಯ್ಕೆಯನ್ನು ಸೂಚಿಸಲು ಅವಕಾಶವಿತ್ತು ಮತ್ತು ಇದರ ಪರಿಣಾಮವಾಗಿ, ವಿಶಿಷ್ಟವಾಗಿ ಅದನ್ನು ಬದಲಾಯಿಸದ ಹೊರತು ಇದು ಇತರೆ ಸಂರಚನಾ ವಿಭಾಗಗಳಲ್ಲಿ ಪೂರ್ವನಿಯೋಜಿತ ಸಿದ್ಧತೆಯಾಗಿರುತ್ತಿತ್ತು
ಆಂತರಿಕ ದೋಷನಿದಾನ ಲಾಗಿಂಗ್ ಸವಲತ್ತುಗಳಿಗೆ ಮಾಡಲಾದ ಹಲವಾರು ಬದಲಾವಣೆಗಳ ಕಾರಣದಿಂದಾಗಿ debug_level ಆಯ್ಕೆಗಾಗಿ [sssd] ವಿಭಾಗದಿಂದ ಪೂರ್ವನಿಯೋಜಿತವಾದ ಮೌಲ್ಯವನ್ನು ಪಡೆಯುವುದರ ಬದಲು ಯಾವಾಗಲೂ ಸಂರಚನಾ ಕಡತದ ಪ್ರತಿಯೊಂದು ವಿಭಾಗದಲ್ಲಿಯೂ ಸಹ ಪ್ರತ್ಯೇಕವಾಗಿ ಸೂಚಿಸುವುದು ಅಗತ್ಯವಾಗಿದೆ.
ಇದರ ಪರಿಣಾಮವಾಗಿ, SSSD ಯ ಇತ್ತೀಚಿನ ಒಂದು ಆವೃತ್ತಿಗೆ ಅಪ್‌ಡೇಟ್ ಮಾಡಿದ ನಂತರ, ಬಳಕೆದಾರರು ಅದೇ ಹಂತದಲ್ಲಿ ಬಳಕೆದಾರರು ದೋಷನಿದಾನ ಲಾಗಿಂಗ್ ಅನ್ನು ಸ್ವೀಕರಿಸುವುದನ್ನು ಮುಂದುವರೆಸಲು ಅವರ ಸಂರಚನೆಯನ್ನು ಅಪ್‌ಡೇಟ್ ಮಾಡುವುದು ಅಗತ್ಯವಾಗಿರುತ್ತದೆ. ಪ್ರತಿ ಗಣಕದಲ್ಲಿಯೂ ಸಹ ಪ್ರತ್ಯೇಕವಾಗಿ SSSD ಅನ್ನು ಸಂರಚಿಸುವ ಬಳಕೆದಾರರು ತಮ್ಮ ಈಗಿರುವ ಸಂರಚನೆಯನ್ನು ಒಂದು ಹೊಂದಿಕೆಯಾಗುವ ರೀತಿಯಲ್ಲಿ ಅಪ್‌ಡೇಟ್‌ ಮಾಡುವಂತಹ Python ಸವಲತ್ತನ್ನು ಬಳಸಲು ಸಾಧ್ಯವಿರುತ್ತದೆ. ನಿರ್ವಾಹಕರಾಗಿ ಈ ಕೆಳಗಿನ ಆಜ್ಞೆಯನ್ನು ಚಲಾಯಿಸುವ ಮೂಲಕ ಇದನ್ನು ಸಾಧಿಸಲುಬಹುದಾಗಿರುತ್ತದೆ.
~]# python /usr/lib/python2.6/site-packages/sssd_update_debug_levels.py
ಈ ಸವಲತ್ತು ಸಂರಚನಾ ಕಡತದಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡುತ್ತದೆ: [sssd] ವಿಭಾಗದಲ್ಲಿ debug_level ಆಯ್ಕೆಯನ್ನು ಸೂಚಿಸಲಾಗಿದೆ ಎಂದು ಪರಿಶೀಲಿಸುತ್ತದೆ. ಹಾಗಿದ್ದಲ್ಲಿ, debug_level ಅನ್ನು ಸೂಚಿಸದೆ ಇರುವ sssd.conf ಕಡತದಲ್ಲಿನ ಪ್ರತಿ ಇತರೆ ವಿಭಾಗಕ್ಕೂ ಸಹ ಒಂದೇ ಮೌಲ್ಯವನ್ನು ಸೇರಿಸುತ್ತದೆ. debug_level ಆಯ್ಕೆಯ ಈಗಾಗಲೆ ಸ್ಪಷ್ಟವಾಗಿ ಸೂಚಿಸಲಾಗಿದ್ದರೆ, ಅದನ್ನು ಹಾಗೆ ಇರಿಸಿಲಾಗುತ್ತದೆ.
ಕೇಂದ್ರೀಕೃತ ಸಂರಚನ ನಿರ್ವಹಣಾ ಉಪಕರಣಗಳನ್ನು ನೆಚ್ಚಿಕೊಂಡಿರುವ ಬಳಕೆದಾರರು ಸೂಕ್ತವಾದ ಉಪಕರಣಕ್ಕೆ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.
ಹೊಸ ldap_chpass_update_last_change ಆಯ್ಕೆ
ldap_chpass_update_last_change ಎಂಬ ಒಂದು ಹೊಸ ಆಯ್ಕೆಯನ್ನು,SSSD ಸಂರಚನೆಗೆ ಸೇರಿಸಲಾಗಿದೆ. ಈ ಆಯ್ಕೆಯನ್ನು ಸಕ್ರಿಯಗೊಳಿಸಿದಲ್ಲಿ, SSSD ಯು ಪ್ರಸಕ್ತ ಸಮಯದಲ್ಲಿ shadowLastChange LDAP ಗುಣವಿಶೇಷವನ್ನು ಬದಲಾಯಿಸಲು ಪ್ರಯತ್ನಿಸುತ್ತದೆ. ಇದು ಕೇವಲ LDAP ಗುಪ್ತಪದ ನೀತಿಯನ್ನು ಬಳಸುವ ಸನ್ನಿವೇಶಕ್ಕೆ ಮಾತ್ರ ಇದು ಸಂಬಂಧಿಸಿರುತ್ತದೆ ಎನ್ನುವುದನ್ನು ನೆನಪಿಡಿ (ಸಾಮಾನ್ಯವಾಗಿ LDAP ಪರಿಚಾರಕಗಣಕದಿಂದ ಮಾತ್ರ ನೋಡಿಕೊಳ್ಳಲಾಗುತ್ತದೆ), ಅಂದರೆ, LDAP ವಿಸ್ತೃತ ಕಾರ್ಯಾಚರಣೆಯನ್ನು ಗುಪ್ತಬದಲಾವಣೆಯಲ್ಲಿ ಮಾತ್ರ ಬಳಸಲಾಗುತ್ತದೆ. ಜೊತೆಗೆ ಗುಪ್ತಪದವನ್ನು ಬದಲಾಯಿಸುವ ಬಳಕೆದಾರರಿಗೆ ಗುಣವಿಶೇಷವನ್ನು ಬದಲಾಯಿಸುವ ಅಧಿಕಾರ ಇರಬೇಕು ಎನ್ನುವುದನ್ನು ನೆನಪಿಡಿ.

ಅಧ್ಯಾಯ 6. ಎಂಟೈಟಲ್ಮೆಂಟ್

RHN ಕ್ಲಾಸಿಕ್‌ನಿಂದ ಪ್ರಮಾಣಪತ್ರ-ಆಧರಿತ RHNಗೆ ವರ್ಗಾವಣೆ
Red Hat Enterprise Linux 6.3 ರಲ್ಲಿ RHN Classic ಗ್ರಾಹಕರು ಪ್ರಮಾಣಪತ್ರ-ಆಧರಿತ RHN ಗೆ ವರ್ಗಾವಣೆ ಹೊಂದಲು ಹೊಸ ಉಪಕರಣವನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ Red Hat Enterprise Linux 6 Deployment Guide. ಅನ್ನು ನೋಡಿ.
ಚಂದಾದಾರ ವ್ಯವಸ್ಥಾಪಕ gpgcheck ವರ್ತನೆ
ಚಂದಾದಾರ ವ್ಯವಸ್ಥಾಪಕವು ತಾನು ನೋಡಿಕೊಳ್ಳುವ ಯಾವುದೆ ರೆಪೊಸಿಟರಿಗಳು gpgkey ಕೀಲಿಯನ್ನು ಹೊಂದಿರದೆ ಇದ್ದಲ್ಲಿ ಇನ್ನು ಮುಂದೆ ಚಂದಾದಾರಿಕೆ ವ್ಯವಸ್ಥಾಪಕವು gpgcheck ಅನ್ನು ಸಕ್ರಿಯಗೊಳಿಸುತ್ತದೆ. ರೆಪೊಸಿಟರಿಯನ್ನು ಪುನಃ ಸಕ್ರಿಯಗೊಳಿಸಲು, GPG ಕೀಲಿಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ, ಮತ್ತು ನಿಮ್ಮ ಇಚ್ಛೆಯ ಕಂಟೆಂಟ್ ವಿವರಣೆಯಲ್ಲಿ ಸರಿಯಾದ URL ಅನ್ನು ನಮೂದಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.

ಅಧ್ಯಾಯ 7. ವರ್ಚುವಲೈಸೇಶನ್

7.1. KVM

KVM ಸ್ಕೇಲೆಬಿಲಿಟಿ ವರ್ಧನೆಗಳು
Red Hat Enterprise Linux 6.3 ರಲ್ಲಿನ KVM ಸ್ಕೇಲೆಬಿಲಿಟಿ ವರ್ಧನೆಗಳು ಈ ಕೆಳಗಿನವುಗಳನ್ನು ಹೊಂದಿರುತ್ತವೆ:
  • ಬೆಂಬಲಿಸಲಾಗುವ ಗರಿಷ್ಟ ವರ್ಚುವಲ್ ಅತಿಥಿಗಳ ಸಂಖ್ಯೆಯನ್ನು 64 ಇಂದ 160 ವರ್ಚುವಲ್ CPUಗಳಿಗೆ (vCPUಗಳು) ಹೆಚ್ಚಳ.
  • KVM ಅತಿಥಿಗಣಕದಲ್ಲಿ ಬೆಂಬಲಿಸಲಾಗುವ ಗರಿಷ್ಟ ಮೆಮೊರಿಯನ್ನು 512 GB ಇಂದ 2 TB ಗೆ ಹೆಚ್ಚಳ.
ಹೊಸ Intel ಮತ್ತು AMD ಸಂಸ್ಕಾರಕಗಳಿಗಾಗಿ KVM ಬೆಂಬಲ
Red Hat Enterprise Linux 6.3 ರಲ್ಲಿನ KVM ಈ ಕೆಳಗಿನ ಬೆಂಬಲವನ್ನು ಹೊಂದಿರುತ್ತದೆ:
  • Sandy Bridge ಎಂದು ಹಿಂದೆ ಕರೆಯಲಾಗುತ್ತಿದ್ದಂತಹ Intel Core i3, i5, i7 ಮತ್ತು ಇತರೆ ಸಂಸ್ಕಾರಗಳು,
  • ಮತ್ತು AMD ಗುಂಪಿನ 15h ಸಂಸ್ಕಾರಗಳು (Bulldozer ಎಂಬ ಹೆಸರಿನವುಗಳು).
KVM ನಲ್ಲಿನ ಹೊಸ CPU ಮಾದರಿ ವಿವರಗಳು KVM ಆತಿಥೇಯಗಣಕಕ್ಕೆ ಮತ್ತು ವರ್ಚುವಲ್‌ ಮಾಡಲಾದ ಅತಿಥಿಗಣಕಕ್ಕೆ ಅಗತ್ಯವಿರುವ ಹೊಸ ಸಂಸ್ಕಾರಕಗಳನ್ನು ಸಕ್ರಿಯಗೊಳಿಸುವಿಕೆಯನ್ನು ಒದಗಿಸುತ್ತದೆ. ಇದರಿಂದಾಗಿ KVM ವರ್ಚುವಲ್ ಮಾಡುವಿಕೆಯು ಹೊಸ ಸಂಸ್ಕಾರಕಗಳಲ್ಲಿನ ಕಾರ್ಯಕ್ಷಮತೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ, ಮತ್ತು ಇತ್ತೀಚಿನ CPUಗಳಲ್ಲಿನ ಹೊಸ ಸೂಚನೆಗಳ ಲಾಭವನ್ನು ಹೊಂದುತ್ತದೆ.
KVM ಸ್ಟೀಲ್ ಟೈಮ್ ಬೆಂಬಲ
ಸ್ಟೀಲ್ ಟೈಮ್ ಎನ್ನುವುದು ವರ್ಚುವಲ್ ಹೈಪರ್ವೈಸರ್ ಬೇರೊಂದು ವರ್ಚುವಲ್ CPU ಗೆ ಸೇವೆ ಸಲ್ಲಿಸುತ್ತಿರುವಾಗ ನಿಜವಾದ CPU ಗಾಗಿ ಕಾಯಲಾಗುವ ಸಮಯವಾಗಿರುತ್ತದೆ. KVM ವರ್ಚುವಲ್ ಗಣಕಗಳು ಈಗ ಸ್ಟೀಲ್ ಟೈಮ್ ಅನ್ನು ಲೆಕ್ಕಹಾಕುವ ಮತ್ತು ವರದಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಇದು top ಮತ್ತು vmstat ನಂತಹ ಉಪಕರಣದ ಮುಖಾಂತರ ನೋಡಬಹುದಾಗಿರುತ್ತದೆ. ಇದರಿಂದಾಗಿ ನಿಖರವಾದ CPU ಬಳಕೆಯ ದತ್ತಾಂಶವು ದೊರೆಯುತ್ತದೆ.
KVM ಸ್ಟೀಲ್ ಟೈಮ್ ಸೌಕರ್ಯವು, CPU ಬಳಕೆ ಮತ್ತು ವರ್ಚುವಲ್ ಗಣಕದ ಕಾರ್ಯಕ್ಷಮತೆಯ ಕುರಿತಾದ ನಿಖರವಾದ ಮಾಹಿತಿಯನ್ನು ಅತಿಥಿಗಣಕಕ್ಕೆ ನೀಡುತ್ತದೆ. CPU ಸಮಯವು ಹೆಚ್ಚಿದನದ್ದಾಗಿದ್ದರೆ ಅತಿಥಿಗಣಕದ ಹೈಪರ್ವೈಸರಿಗೆ ನಿಯೋಜಿಸಲಾದ CPU ಸಮಯದಿಂದ ವರ್ಚುವಲ್ ಗಣಕದ ಕಾರ್ಯಕ್ಷಮತೆಯು ಮೊಟಕುಗೊಂಡಿದೆ ಎನ್ನುವುದನ್ನು ಸೂಚಿಸುತ್ತದೆ. ಬಳಕೆದಾರರು ಆತಿಥೇಯ ಗಣಕದಲ್ಲಿ ಕಡಿಮೆ ಸಂಖ್ಯೆಯ ಅತಿಥಿಗಣಕಗಳನ್ನು ಚಲಾಯಿಸುವ ಮೂಲಕ ಅಥವ ಅತಿಥಿಗಣಕದ ಆದ್ಯತೆಯನ್ನು ಹೆಚ್ಚಿಸುವ ಮೂಲಕ CPU ಇಂದ ಉಂಟಾದ ತೊಂದರೆಯಿಂದ ಪರಿಹಾರವನ್ನು ಪಡೆಯಲು ಸಾಧ್ಯವಿರುತ್ತದೆ. KVM ಸ್ಟೀಲ್ ಟೈಮ್ ಮೌಲ್ಯವು ಮುಂದಿನ ಹಂತದ ಬಳಕೆದಾರರಿಗೆ ತಮ್ಮ ಅನ್ವಯದ ಚಾಲನಾ-ಸಮಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ತೆಗೆದುಕೊಳ್ಳಬೇಕಿರುವ ಮುಂದಿನ ಹಂತಗಳನ್ನು ಸುಧಾರಿಸುವಲ್ಲಿ ನೆರವಾಗುತ್ತದೆ.
qcow2 ಡಿಸ್ಕ್‍ ಚಿತ್ರಿಕೆಗಳನ್ನು ನಿಲುಕಿಸಿಕೊಳ್ಳಲು ಸುಧಾರಿತ ನಿಲುಕಣೆ
Red Hat Enterprise Linux 6.3 ರಲ್ಲಿ KVM, qcow2 ಡಿಸ್ಕ್‍ ಚಿತ್ರಿಕೆಗಳನ್ನು ಅಸಮಕಾಲೀನಗೊಳಿಸುವ ಮೂಲಕ ನಿಲುಕಣೆಯನ್ನು ಸುಧಾರಿಸಿದೆ (qcow2 ಎನ್ನುವುದು ಪೂರ್ವನಿಯೋಜಿತ ವಿನ್ಯಾಸವಾಗಿರುತ್ತದೆ), ಆ ಮೂಲಕ vCPU ನಿಲುಗಡೆಗಳನ್ನು ತಪ್ಪಿಸುತ್ತದೆ ಮತ್ತು ಡಿಸ್ಕ್‍ I/O ಸಮಯದಲ್ಲಿ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
ಹೊಸ qemu-guest-agent ಉಪಪ್ಯಾಕೇಜು
qemu-kvm, qemu-guest-agent ಎಂಬ ಒಂದು ಹೊಸ ಉಪಪ್ಯಾಕೇಜನ್ನು ಹೊಂದಿದೆ. ಈ ಪ್ಯಾಕೇಜನ್ನು ಅನುಸ್ಥಾಪಿಸಿ ನಂತರ Red Hat Enterprise Linux 6.3 ಅತಿಥಿಗಣಕಗಳನ್ನು ಚಲಾಯಿಸುವಾಗ, ಸರಿಯಾಗಿ ಸಂರಚಿಸಲಾದ Red Hat Enterprise Linux 6.3 ಅತಿಥೇಯಗಣಕಗಳು ಈ ಕೆಳಗಿನಂತಹ ಆಜ್ಞೆಗಳನ್ನು ಅತಿಥಿಗಣಕಕ್ಕೆ ಕಳುಹಿಸಬಹುದಾಗಿರುತ್ತದೆ: guest-sync, guest-ping, guest-info, guest-shutdown, ಮತ್ತು guest-suspend-*.
ಅತಿಥಿಗಣಕ ಮಧ್ಯವರ್ತಿಯೊಂದಿಗೆ ವ್ಯವಹರಿಸುವ ರೀತಿಯನ್ನು ಸಂರಚಿಸುವುದು ಹೇಗೆ ಎಂದು ತಿಳಿಯಲು, ಈ ಉದಾಹರಣೆಯನ್ನು ನೋಡಿ http://lists.nongnu.org/archive/html/qemu-devel/2011-07/msg00370.html.
KVM ಅತಿಥಿಗಣಕಗಳಲ್ಲಿ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ
KVM ಈಗ ವರ್ಚುವಲ್ ಗಣಕಗಳು ಕಾರ್ಯನಿರ್ವಹಣೆ ಮೇಲ್ವಿಚಾರಣೆಯನ್ನು ಬಳಸುವುದನ್ನು ಅನುಮತಿಸಲು ಕಾರ್ಯನಿರ್ವಹಣೆಯ ಮೇಲ್ವಿಚಾರಣಾ ಘಟಕವನ್ನು ವರ್ಚುವಲ್ ಮಾಡಬಹುದು (vPMU). ಜೊತೆಗೆ Intel ನ architectural PMU ಅನ್ನು ಬೆಂಬಲಿಸುತ್ತದೆ. ಇದನ್ನು ಆತಿಥೇಯಗಣಕದ ಫ್ಲ್ಯಾಗ್ ಆದಂತಹ -cpu ಅನ್ನು ಬಳಸಿಕೊಂಡು ವಿವಿಧ ಆತಿಥೇಯಗಣಕ CPU ಆವೃತ್ತಿಗಳ ನಡುವೆ ಲೈವ್-ವರ್ಗಾವಣೆಯನ್ನು ನಡೆಸಲು ಸಾಧ್ಯವಿರುತ್ತದೆ.
ಈ ಸವಲತ್ತಿನಿಂದಾಗಿ, Red Hat ವರ್ಚುವಲೈಸೇಶನ್ ಗ್ರಾಹಕರು KVM ಅತಿಥಿಗಳಲ್ಲಿ ಯಾವುದೆ ತೊಂದರೆ ಇಲ್ಲದೆ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಯನ್ನು ಬಳಸಿಕೊಳ್ಳಲು ಸಾಧ್ಯವಿರುತ್ತದೆ. ವರ್ಚುವಲ್ ಕಾರ್ಯನಿರ್ವಹಣೆ ಮೇಲ್ವಿಚಾರಣಾ ಸವಲತ್ತಿನಿಂದಾಗಿ ವರ್ಚುವಲ್ ಗಣಕದ ಬಳಕೆದಾರರು, ಈಗಾಗಲೆ ಇರುವ ಅವರ ಇಚ್ಛೆಯ ಪ್ರೊಫೈಲಿಂಗ್ ಉಪಕರಣವನ್ನು ಬಳಸಿಕೊಂಡು ತಮ್ಮ ಅತಿಥಿಗಣಕಗಳಲ್ಲಿನ ಕಾರ್ಯನಿರ್ವಹಣಾ ದೋಷಗಳ ಮೂಲಗಳನ್ನು ಪತ್ತೆ ಹಚ್ಚಲು ಸಾಧ್ಯವಿರುತ್ತದೆ. ಇದು ಆತಿಥೇಯಗಣಕದಿಂದ KVM ಅತಿಥಿಯನ್ನು ಪ್ರೊಫೈಲ್ ಮಾಡುವ ಈಗಿರುವ ಸಾಮರ್ಥ್ಯಕ್ಕೆ ಒಂದು ಹೆಚ್ಚಿನ ಸವಲತ್ತಾಗಿರುತ್ತದೆ.
ಈ ಸವಲತ್ತು Red Hat Enterprise Linux 6.3 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿರುತ್ತದೆ.
ಕ್ರಿಯಾತ್ಮಕ CPU ನಿಯೋಜನೆ
Red Hat Enterprise Linux 6.3 ರಲ್ಲಿನ KVM ಈಗ ಕ್ರಿಯಾತ್ಮಕ CPU ನಿಯೋಜನೆಯನ್ನು ಬೆಂಬಲಿಸುತ್ತದೆ. vCPU ಹಾಟ್ ಪ್ಲಗ್‌ ಎಂದೂ ಸಹ ಕರೆಯಲಾಗುವ ಇದನ್ನು ಬಳಸಿಕೊಂಡು ಕ್ರಿಯಾತ್ಮಕವಾಗಿ ಸಾಮರ್ಥ್ಯವನ್ನು ನಿರ್ವಹಿಸುವ ಮತ್ತು ಆಫ್‌-ಪೀಕ್ ಸಮಯದಲ್ಲಿ ಅವುಗಳ ಪ್ಲಾಟ್‌ಫಾರ್ಮುಗಳಲ್ಲಿ ಅನಿರೀಕ್ಷಿತ ಹೊರೆ ಹೆಚ್ಚಳಕ್ಕೆ ಪ್ರತಿಕ್ರಿಯಿಸಲು ಸಾಧ್ಯವಿರುತ್ತದೆ.
ವರ್ಚುವಲ್ CPU ಹಾಟ್-ಪ್ಲಗ್ಗಿಂಗ್ ಸವಲತ್ತಿನಿಂದಾಗಿ ವ್ಯವಸ್ಥೆಯ ನಿರ್ವಾಹಕರು ಅತಿಥಿಯಲ್ಲಿ CPU ಸಂಪನ್ಮೂಲಗಳನ್ನು ಕ್ರಿಯಾತ್ಮಕವಾಗಿ ಸರಿಹೊಂದಿಸಲು ಸಾಧ್ಯವಾಗುತ್ತದೆ. CPU ಸಂಪನ್ಮೂಲಗಳನ್ನು ಸರಿಪಡಿಸಲು ಅತಿಥಿಗಣಕಗಳನ್ನು ಆಫ್‌ಲೈನಿಗೆ ತೆಗೆದುಕೊಂಡು ಹೋಗುವ ಅಗತ್ಯವಿರದ ಕಾರಣ, ಅತಿಥಿಯ ಲಭ್ಯತೆಯನ್ನು ಹೆಚ್ಚಿಸಲಾಗಿದೆ.
ಈ ಸವಲತ್ತು Red Hat Enterprise Linux 6.3 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿರುತ್ತದೆ. ಪ್ರಸಕ್ತ, ಕೇವಲ ಅತಿಥಿಗಣಕದಲ್ಲಿ vCPU ಹಾಟ್-ಆಡ್ ಸೌಕರ್ಯವು ಮಾತ್ರ ಲಭ್ಯವಿರುತ್ತದೆ. vCPU ಹಾಟ್ ಅನ್‌ಪ್ಲಗ್‌ ಸವಲತ್ತನ್ನು ಇನ್ನೂ ಸಹ ಅಳವಡಿಸಲಾಗಿಲ್ಲ.
Virtio-SCSI ಸಾಮರ್ಥ್ಯಗಳು
virtio-SCSI (SCSI ಯಲ್ಲಿನ KVM ಆಧರಿತವಾದ ಶೇಖರಣಾ ಆರ್ಕಿಟೆಕ್ಚರ್) ಸಾಮರ್ಥ್ಯಗಳನ್ನು ಸೇರಿಸುವ ಮೂಲಕ KVM ವರ್ಚುವಲೈಸೇಶನ್‌ನ ಶೇಖರಣಾ ಸ್ಟ್ಯಾಕ್‌ ಅನ್ನು ಸುಧಾರಿಸಲಾಗಿದೆ. Virtio-SCSI ಯು ನೇರವಾಗಿ SCSI LUNಗಳೊಂದಿಗೆ ಸಂಪರ್ಕಸಾಧಿಸುತ್ತದೆ ಮತ್ತು virtio-blk ಯ ಹೋಲಿಕೆಯಲ್ಲಿ ಗಮನಾರ್ಹವಾಗಿ ಗಾತ್ರ ಬದಲಾವಣೆಯನ್ನು (ಸ್ಕೇಲೆಬಿಲಿಟಿ) ಸುಧಾರಿಸುತ್ತದೆ. virtio-SCSI ಯ ಪ್ರಯೋಜನವೆಂದರೆ, ಕೇವಲ 28 ಸಾಧನಗಳನ್ನು ಮಾತ್ರ ನಿಭಾಯಿಸಬಲ್ಲ ಮತ್ತು PCI ಸ್ಲಾಟ್‌ಗಳನ್ನು ಸಂಪೂರ್ಣವಾಗಿ ಬಳಸಬಲ್ಲ virtio-blk ಹೋಲಿಸಿದಲ್ಲಿ ಇದು ನೂರಾರು ಸಾಧನಗಳನ್ನು ನಿಭಾಯಿಸಬಲ್ಲದು.
Virtio-SCSI ಈಗ ಈ ಕೆಳಗಿನ ಸಾಮರ್ಥ್ಯಗಳೊಂದಿಗೆ ನಿರ್ದೇಶಿತ ಸಾಧನದ ಸವಲತ್ತನ್ನು ಹಾಗೆಯೆ ಇರಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ:
  • ಒಂದು ವರ್ಚುವಲ್ ಹಾರ್ಡ್ ಡ್ರೈವ್ ಅಥವ CD ಯ ಮುಖಾಂತರ virtio-scsi ನಿಯಂತ್ರಕವನ್ನು ಲಗತ್ತಿಸುವಿಕೆ,
  • QEMU scsi-block ಸಾಧನದ ಮುಖಾಂತರ ಒಂದು ಭೌತಿಕ SCSI ಸಾಧನವನ್ನು ಆತಿಥೇಯಗಣಕದಿಂದ ಅತಿಥಿಗಣಕ್ಕೆ ರವಾನಿಸುವಿಕೆ,
  • ಮತ್ತು ಪ್ರತಿ ಅತಿಥಿಗಣಕಕ್ಕೆ ನೂರಾರು ಸಾಧನಗಳ ಬಳಕೆಯನ್ನು ಅನುಮತಿಸುವುದು; virtio-blk ನಲ್ಲಿನ 28-ಸಾಧನದ ಮಿತಿಯ ಹೋಲಿಕೆಯಲ್ಲಿ ಒಂದು ಸುಧಾರಣೆ.
ಈ ಸವಲತ್ತು Red Hat Enterprise Linux 6.3 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿರುತ್ತದೆ.
ಅತಿಥಿಗಣಕದಲ್ಲಿನ S4/S3 ಸ್ಥಿತಿಗಳಿಗೆ ಬೆಂಬಲ
KVM ನ ವಿದ್ಯುಚ್ಛಕ್ತಿ ನಿರ್ವಹಣಾ ಸವಲತ್ತುಗಳನ್ನು ವರ್ಚುವಲ್‌ ಗಣಕದಲ್ಲಿನ S4 (ಡಿಸ್ಕಿಗೆ ಅಮಾನತುಗೊಳ್ಳು) ಮತ್ತು S3 (RAM ಗೆ ಅಮಾನತುಗೊಳ್ಳು) ಸ್ಥಿತಿಗಳಿಗೆ ಬೆಂಬಲವನ್ನು ಸೇರಿಸುವಂತೆ, ಕಡಿಮೆ ವಿದ್ಯುಚ್ಛಕ್ತಿ ಸ್ಥಿತಿಗಳಿಂದ ಅತಿಥಿಯನ್ನು ಪುನಃಸ್ಥಾಪಿಸುವ ಪ್ರಕ್ರಿಯೆಯನ್ನು ವೇಗವಾಗಿಸುವಿಕೆಯನ್ನು ಬೆಂಬಲಿಸುವಂತೆ ವಿಸ್ತರಿಸಲಾಗಿದೆ. ಈ ಹಿಂದಿನ ಅಳವಡಿಕೆಗಳಲ್ಲಿ ಅತಿಥಿಗಣಕಗಳನ್ನು ಅದರ ಹೊರಗಿರುವ ಡಿಸ್ಕ್‍ ಅಥವ ಮೆಮೊರಿಗೆ ಅಥವ ಇಂದ ಅತಿಥಿಗಣಕಗಳನ್ನು ಉಳಿಸಲಾಗುತ್ತಿತ್ತು ಅಥವ ಪುನಃ ಸ್ಥಾಪಿಸಲಾಗುತ್ತಿತ್ತು, ಇದರಿಂದಾಗಿ ಸುಪ್ತತೆಯು ಹೆಚ್ಚಾಗುತ್ತಿತ್ತು.
ಜೊತೆಗೆ, S3 ಸ್ಥಿತಿಯಲ್ಲಿನ ಅತಿಥಿಗಣಕಗಳನ್ನು SPICE ಮೂಲಕ ದೂರಸ್ಥ ಕೀಲಿಮಣೆಯನ್ನು ಬಳಸಿಕೊಂಡು ಎಚ್ಚರಿಸಲು ಸಾಧ್ಯವಿರುತ್ತದೆ.
ಇದು ಒಂದು ತಂತ್ರಜ್ಞಾನ ಮುನ್ನೋಟವಾಗಿರುತ್ತದೆ ಮತ್ತು ಪೂರ್ವನಿಯೋಜಿತವಾಗಿ Red Hat Enterprise Linux 6.3 ರಲ್ಲಿ ಇದನ್ನು ನಿಷ್ಕ್ರಿಯಗೊಳಿಸಲಾಗಿರುತ್ತದೆ. ಇದನ್ನು ಸಕ್ರಿಯಗೊಳಿಸಲು, VM bios ಗಾಗಿ ಪೂರ್ವನಿಯೋಜಿತವಾದ /usr/share/seabios/bios.bin ಕಡತದ ಬದಲಿಗೆ /usr/share/seabios/bios-pm.bin ಕಡತವನ್ನು ಆಯ್ಕೆ ಮಾಡಿಕೊಳ್ಳಿ.
ಸ್ಥಳೀಯವಾಗಿ, ಅತಿಥಿಗಣಕದಲ್ಲಿಯ S4 (ಡಿಸ್ಕಿಗೆ ಅಮಾನತುಗೊಳಿಸು) ಮತ್ತು S3 (RAM ಗೆ ಅಮಾನತುಗೊಳಿಸು) ವಿದ್ಯುಚ್ಛಕ್ತಿ ವ್ಯವಸ್ಥಾಪನಾ ಸವಲತ್ತುಗಳು ಅತಿಥಿಗಣಕದಲ್ಲಿ (ಆತಿಥೇಯದಲ್ಲಿ ನಡೆಯುವುದಕ್ಕಿಂತ ವಿರುದ್ಧವಾಗಿ) ಡಿಸ್ಕಿಗೆ ಅಮಾನತುಗೊಳಿಸುವ ಮತ್ತು RAM ಗೆ ಅಮಾನತುಗೊಳಿಸುವ ಕ್ರಿಯೆಗಳನ್ನು ಬೆಂಬಲಿಸುತ್ತವೆ, ಇದರಿಂದಾಗಿ ಕೀಲಿಮಣೆಯ ನಮೂದನೆಗೆ ಪ್ರತಿಕ್ರಿಯಿಸುವ ಮೂಲಕ ಅತಿಥಿಗಣಕವನ್ನು ಮರಳಿ ಸ್ಥಾಪಿಸುವ ಸಮಯವು ಕಡಿಮೆಯಾಗುತ್ತದೆ. ಇದು ಬಾಹ್ಯ ಮೆಮೊರಿ-ಸ್ಥಿತಿ ಕಡತವನ್ನು ಇರಿಸಿಕೊಳ್ಳುವ ಅಗತ್ಯವನ್ನು ಇಲ್ಲವಾಗಿಸುತ್ತದೆ. ಈ ಸಾಮರ್ಥ್ಯವು S3 ಮತ್ತು S4 ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರುವ ಯಾವುದೆ ಹೈಪರ್ವೈಸರಿನಲ್ಲಿನ Red Hat Enterprise Linux 6.3 ಅತಿಥಿಗಣಕದಲ್ಲಿ ಮತ್ತು Windows ಅತಿಥಿಗಣಕದಲ್ಲಿ ಬೆಂಬಲಿತವಾಗಿರುತ್ತದೆ.
NIC ಗಾಗಿ SR-IOV ಬೆಂಬಲ
Red Hat Enterprise Linux 6.3 ರಲ್ಲಿ ಜಾಲಬಂಧ ಸಂಪರ್ಕಸಾಧನ ನಿಯಂತ್ರಕಗಳಿಗಾಗಿ SR-IOV ಬೆಂಬಲವನ್ನು ಪರಿಚಯಿಸಲಾಗಿದೆ. ಈ ಸವಲತ್ತು KVM ಆತಿಥೇಯಗಣಕದಲ್ಲಿನ NIC ಅನ್ನು KVM ಅತಿಥಿಗಣಕಗಳಿಂದ ಹಂಚಿಕೊಳ್ಳಲು ಅವಕಾಶ ಒದಗಿಸುತ್ತದೆ. SR-IOV ಕುರಿತಾದ ಹೆಚ್ಚಿನ ಮಾಹಿತಿಗಾಗಿ, Virtualization Host Configuration and Guest Installation Guide ನಲ್ಲಿನ Chapter 13. SR-IOV ಅನ್ನು ನೋಡಿ. be2net ಚಾಲಕದಲ್ಲಿನ SR-IOV ಕುರಿತಾದ ಮಾಹಿತಿಗಾಗಿ, ಅಧ್ಯಾಯ 2, ಸಾಧನದ ಚಾಲಕಗಳು ಅನ್ನು ನೋಡಿ.
AMD-V ಗಾಗಿನ KVM ನಲ್ಲಿ TSC ಸ್ಕೇಲಿಂಗ್
Red Hat Enterprise Linux 6.3 ರಲ್ಲಿ AMD Virtualization (AMD-V) ಗಾಗಿನ KVM ಗೆ ಸ್ಕೇಲಿಂಗ್ ಮಾಡಲು ಟೈಮ್ ಸ್ಟ್ಯಾಂಪ್ ಕೌಂಟರಿಗೆ (TSC) ಬೆಂಬಲವನ್ನು ಸೇರಿಸಲಾಗಿದೆ. ಈ ಸವಲತ್ತು ಒದಗಿಸಲಾದ ಒಂದು TSC ಫ್ರೀಕ್ವೆನ್ಸಿಯನ್ನು KVM ಅತಿಥಿಗಣಕದಲ್ಲಿ ಅನುಕರಿಸುವ ಸಾಮರ್ಥ್ಯವನ್ನು ಹೊಂದಿದೆ.
perf-kvm ಗಾಗಿ ಬೆಂಬಲ
perf-kvm ಉಪಕರಣಕ್ಕಾಗಿನ ಬೆಂಬಲವನ್ನು ಸೇರಿಸಲಾಗಿದ್ದು, ಇದು ಆತಿಥೇಯಗಣಕದಿಂದ ಅತಿಥಿಗಣಕದ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, perf-kvm ಮಾಹಿತಿ ಪುಟವನ್ನು ನೋಡಿ.

7.2. SPICE

USB 2.0 ಮರುನಿರ್ದೇಶನದ ಬೆಂಬಲ
KVM USB 2.0 ಆತಿಥೇಯಗಣಕ ಅಡಾಪ್ಟರ್ ಅನುಕರಣೆ ಬೆಂಬಲದಲ್ಲಿ Spice ನಿರ್ಮಾಣಗೊಳ್ಳುತ್ತದೆ ಮತ್ತು ಪೂರೈಕೆಗಣಕಗಳಲ್ಲಿ ಚಾಲನೆಯಲ್ಲಿರುವ ವರ್ಚುವಲ್ ಗಣಕಗಳು ಕ್ಲೈಂಟ್‌ನಲ್ಲಿ ದೂರದಿಂದಲೆ ಜೋಡಿಸಲಾದ USB ಸಾಧನಗಳನ್ನು ಬಳಸುವುದನ್ನು ಅನುಮತಿಸುವ ದೂರಸ್ಥ USB ಮರುನಿರ್ದೇಶನ ಬೆಂಬಲವನ್ನು ಸಕ್ರಿಯಗೊಳಿಸುತ್ತದೆ.

7.3. libvirt

ಅಪ್/ಡೌನ್ ಕೊಂಡಿಯ ಸ್ಥಿತಿಗಳ ನಿಯಂತ್ರಣ
libvirt ಎನ್ನುವುದು ಅತಿಥಿಗಣಕ ಜಾಲಬಂಧ ಸಂಪರ್ಕಸಾಧನಗಳ ಕೊಂಡಿಯನ್ನು ನಿಯಂತ್ರಿಸುವ (ಅಪ್ ಅಥವ ಡೌನ್) ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರಿಂದಾಗಿ ಬಳಕೆದಾರರಿಗೆ ಜಾಲಬಂಧ ಕೇಬಲ್ ಅನ್ನು ಸಂಪರ್ಕಸಾಧನಕ್ಕೆ ಜೋಡಿಸುವ ಮತ್ತು ಸಂಪರ್ಕ ತಪ್ಪಿಸುವ ರೀತಿಯಲ್ಲಿಯೆ ಪರೀಕ್ಷಿಸುವ ಮತ್ತು ಅನುಕರಿಸಲು ಅನುವು ಮಾಡುತ್ತದೆ. ಈ ಸವಲತ್ತು ಯಾವುದೆ ತೊಂದರೆ ಉಂಟಾದಲ್ಲಿ ಅತಿಥಿಗಣಕಗಳನ್ನು ಪ್ರತ್ಯೇಕಿಸಲು ಅವಕಾಶ ಮಾಡಿಕೊಡುತ್ತದೆ.
ಹೊಸ Intel ಮತ್ತು AMD ಸಂಸ್ಕಾರಕಗಳಿಗಾಗಿ ಬೆಂಬಲವನ್ನು ಸೇರಿಸಲಾಗಿದೆ
Red Hat Enterprise Linux 6.3 ರಲ್ಲಿ, libvirt ಅನ್ನು ಇತ್ತೀಚಿನ Intel Core i3, i5, i7 ಮತ್ತು ಇತರೆ Intel ಸಂಸ್ಕಾರಕಗಳನ್ನು ಮತ್ತು 15h ಮೈಕ್ರೊಆರ್ಕಿಟೆಕ್ಚರ್ AMD ಗುಂಪಿನ ಸಂಸ್ಕಾರಕಗಳನ್ನು ಬೆಂಬಲಿಸುವಂತೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್‌ನಿಂದಾಗಿ, libvirt ಈಗ ಆ ಸಂಸ್ಕಾರಕಗಳು ಹೊಂದಿರುವ ಸವಲತ್ತುಗಳನ್ನು ಬಳಸಿಕೊಳ್ಳುತ್ತದೆ.

ಅಧ್ಯಾಯ 8. ಕ್ಲಸ್ಟರಿಂಗ್ ಮತ್ತು ಹೈ ಅವೈಲೆಬಿಲಿಟಿ

ವ್ಯವಸ್ಥಾಪನಾ UI ಸುಧಾರಣೆಗಳು
ಕ್ಲಸ್ಟರುಗಳನ್ನು ಸಂರಚಿಸಲು ಜಾಲ-ಆಧರಿತವಾದ ವ್ಯವಸ್ಥಾಪನಾ UI ಆದಂತಹ Luci ಈ ಕೆಳಗಿನವುಗಳನ್ನು ಸೇರ್ಪಡಿಸುವಂತೆ ಅಪ್‌ಡೇಟ್ ಮಾಡಲಾಗಿದೆ:
  • ಕ್ಲಸ್ಟರ್ ಮಾಡಲಾದ ಸೇವೆಯನ್ನು ತೆಗೆದುಹಾಕುವಾಗ ಒಂದು ಖಚಿತಪಡಿಕೆಯ ಸಂವಾದ ಚೌಕವು ಕಾಣಿಸಿಕೊಳ್ಳುತ್ತದೆ.
  • UI ನಲ್ಲಿ ಸುಧಾರಿತ ಮರುಆರಂಭದ ಚಿಹ್ನೆಯೊಂದನ್ನು ಸೇರಿಸಲಾಗಿದೆ.
  • ಉಪ ಸಂಪನ್ಮೂಲವನ್ನು ಸೇರಿಸು ಗುಂಡಿಯನ್ನು ಸರಳಗೊಳಿಸಲಾಗಿದೆ.
  • UI ಇಂದ ದೋಷನಿದಾನವನ್ನು ಸಕ್ರಿಯಗೊಳಿಸುವ ಒಂದು ಆಯ್ಕೆಯನ್ನು ಸೇರಿಸಲಾಗಿದೆ.
ನಿಷ್ಕ್ರಿಯಗೊಂಡಿರುವ luci ದೃಢೀಕೃತ ಅಧಿವೇಶನಗಳ ಸ್ವಯಂಚಾಲಿತ ಕಾಲಾವಧಿ ತೀರಿಕೆ
Red Hat Enterprise Linux 6.3 ರಲ್ಲಿ, luci ದೃಢೀಕೃತ ಅಧಿವೇಶನಗಳು 15 ನಿಮಿಷ ನಿಷ್ಕ್ರಿಯಗೊಂಡಿದ್ದಲ್ಲಿ ಅದರ ಕಾಲಾವಧಿ ತೀರಿಹೋಗುತ್ತದೆ. ಈ ಕಾಲಾವಧಿಯನ್ನು /etc/sysconfig/luci ಕಡತದಲ್ಲಿನ who.auth_tkt_timeout ನಿಯತಾಂಕವನ್ನು ಬದಲಾಯಿಸುವದರ ಮೂಲಕ ಸೂಚಿಸಬಹುದಾಗಿರುತ್ತದೆ.
ಹೊಸ libqb ಪ್ಯಾಕೇಜುಗಳು
libqb ಪ್ಯಾಕೇಜು, ಅತ್ಯುತ್ತಮ ಕಾರ್ಯಕ್ಷಮತೆಯ ಕ್ಲೈಂಟ್ ಪೂರೈಕೆಗಣಕದಲ್ಲಿನ ಅತ್ಯುತ್ತಮ ಕಾರ್ಯಕ್ಷಮತೆಯ ಲಾಗಿಂಗ್, ಜಾಡು ಇರಿಸುವಿಕೆ, ಪ್ರಕ್ರಿಯೆ-ನಡುವಿನ ಸಂವಹನ, ಮತ್ತು ಪೋಲಿಂಗ್‌ನಂತ ಮರುಬಳಸಬಹುದಾದ ಸವಲತ್ತುಗಳನ್ನು ಒದಗಿಸುವ ಪ್ರಮುಖ ಉದ್ಧೇಶದೊಂದಿಗಿನ ಒಂದು ಲೈಬ್ರರಿಯನ್ನು ಒದಗಿಸುತ್ತದೆ. ಈ ಪ್ಯಾಕೇಜನ್ನು pacemaker ಪ್ಯಾಕೇಜಿನ ಒಂದು ಅವಲಂಬನೆಯಾಗಿ ಪರಿಚಯಿಸಲಾಗಿದ್ದು, ಇದನ್ನು Red Hat Enterprise Linux 6.3 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ಪರಿಗಣಿಸಲಾಗುತ್ತದೆ.
Pacemaker ಈಗ libqb ಲಾಗಿಂಗ್ ಅನ್ನು ಬಳಸುತ್ತದೆ
ಹೊಸದಾಗಿ ಸೇರಿಸಲಾದ libqb ಅವಲಂಬನೆಯಿಂದಾಗಿ pacemaker ಈಗ pacemaker ನ ದೋಷನಿದಾನಗೊಳಿಸುವ ಮತ್ತು ಬೆಂಬಲಿಸುವ ಸಾಮರ್ಥ್ಯವನ್ನು ಇರಿಸಿಕೊಳ್ಳುವ ಸಂದರ್ಭದಲ್ಲಿ ಕಡಿಮೆ ವರ್ಬೋಸಿಟಿಯನ್ನು ಒದಗಿಸಲು ಅದರ ಲಾಗಿಂಗ್ ಕ್ಷಮತೆಯನ್ನು ಬಳಸಿಕೊಳ್ಳುತ್ತದೆ.
ಅಂತರ-ನೋಡ್ ಬಂಧನಕ್ಕಾಗಿ CPG API ಅನ್ನು ಬಳಸಿಕೊಳ್ಳುವಿಕೆ
ಅಂತರ-ನೋಡ್‌ ಬಂಧನಕ್ಕಾಗಿ Corosync's ಕ್ಲೋಸಡ್ ಪ್ರೋಸಸ್ ಗ್ರೂಪ್ (CPG) API ಅನ್ನು ಬಳಸುವ ಸಾಮರ್ಥವನ್ನು ಒದಗಿಸುವ ಒಂದು ಸವಲತ್ತನ್ನು Rgmanager ಹೊಂದಿದೆ. Corosync's ರಿಡಂಡೆಂಟ್ ರಿಂಗ್ ಪ್ರೊಟೊಕಾಲ್ (RRP) ಸವಲತ್ತನ್ನು ಸಕ್ರಿಯಗೊಳಿಸಿದಾಗ ಈ ಸವಲತ್ತು ತಾನಾಗಿಯೆ ಸಕ್ರಿಯಗೊಳ್ಳುತ್ತದೆ. Corosync's RRP ಸವಲತ್ತನ್ನು ಈಗ ಸಂಪೂರ್ಣವಾಗಿ ಬೆಂಬಲಿತವಾಗಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಇತರೆ ಹೈ-ಅವೆಲಿಬಿಲಿಟಿ ಆಡ್-ಆನ್‌ಗಳ ಜೊತೆಗೆ ಬಳಸಿದಾಗ, ಇದನ್ನು ತಂತ್ರಜ್ಞಾನ ಮುನ್ನೋಟ ಎಂದು ಪರಿಗಣಿಸಲಾಗುತ್ತದೆ.

ಅಧ್ಯಾಯ 9. ಶೇಖರಣೆ

LVM (ಕ್ಲಸ್ಟರ್ ಮಾಡದ) ತೆಳುವಾಗಿ-ಒದಗಿಸಲಾದ ಸ್ನ್ಯಾಪ್‌ಶಾಟ್‌ಗಳು
ಹೊಸ LVM ಕಾಪಿ-ಆನ್-ರೈಟ್ (cow) ಸ್ನ್ಯಾಪ್‌ಶಾಟ್‌ಗಳು ಈಗ Red Hat Enterprise Linux 6.3 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ಲಭ್ಯವಿರುತ್ತದೆ. ಸ್ನ್ಯಾಪ್‌ಶಾಟ್‌ಗಳ ಹಿಂದಿನ ಅಳವಡಿಕೆಗಳಿಗೆ ಹೋಲಿಸಿದಲ್ಲಿ ಇದರ ಮುಖ್ಯ ಪ್ರಯೋಜನವೆಂದರೆ, ಒಂದೇ ದತ್ತಾಂಶ ಪರಿಮಾಣದಲ್ಲಿ ಹಲವಾರು ವರ್ಚುವಲ್ ಸಾಧನಗಳನ್ನು ಶೇಖರಿಸಿ ಇಡಲು ಅವಕಾಶ ನೀಡುತ್ತದೆ. ಈ ಅಳವಡಿಕೆಯು ಪುನರಾವರ್ತಿತ ಸ್ನ್ಯಾಪ್‌ಶಾಟ್‌ಗಳ ಒಂದು ಯಾದೃಚ್ಛಿಕ ಸರಣಿಯನ್ನು ಬೆಂಬಲಿಸುತ್ತದೆ (ಸ್ನ್ಯಾಪ್‌ಶಾಟ್‌ನ ಸ್ನ್ಯಾಪ್‌ಶಾಟ್‌ನ ಸ್ನ್ಯಾಪ್‌ಶಾಟ್‌ನ....).
ಈ ವ್ಯವಸ್ಥೆಯನ್ನು ಏಕ-ವ್ಯವಸ್ಥೆಯಲ್ಲಿ ಬಳಸಬಹುದಾಗಿದೆ. ಒಂದು ಕ್ಲಸ್ಟರ್ ಪರಿಸರಗಳಲ್ಲಿನ ಬಹು-ವ್ಯವಸ್ಥೆ ನಿಲುಕಣೆಗೆ ಇದು ಲಭ್ಯವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ, lvcreate ಮಾಹಿತಿ ಪುಟದಲ್ಲಿನ -s/--snapshot ಆಯ್ಕೆಯ ಕುರಿತಾದ ದಸ್ತಾವೇಜನ್ನು ನೋಡಿ.
LVM (ಕ್ಲಸ್ಟರ್ ಮಾಡದ) ತೆಳುವಾಗಿ-ಒದಗಿಸಲಾದ LVಗಳು
ಲಾಜಿಕಲ್ ವಾಲ್ಯೂಮ್‌ಗಳನ್ನು (LVs) ಅನ್ವಯಗಳಿಗೆ ಅಗತ್ಯವಿದ್ದಾಗ, ಒಂದು ಯಾವುದೆ ಸಂಖ್ಯೆಯ ಸಾಧನಗಳಿಗೆ ಶೇಖರಣಾ ಪೂಲ್‌ನಿಂದ ಮುಕ್ತ ಸ್ಥಳವನ್ನು ನಿಯೋಜಿಸುವುದನ್ನು ನೋಡಿಕೊಳ್ಳಲು ವಿರಳವಾಗಿ ಒದಗಣೆ ಮಾಡಬಹುದಾಗಿರುತ್ತದೆ. ಇದರಿಂದಾಗಿ, ಒಂದು ಅನ್ವಯವು LVಗೆ ನಿಜವಾಗಿಯೂ ಬರೆದಾಗ, ತಡವಾದ ನಿಯೋಜನೆಗಾಗಿ ವಿರಳವಾಗಿ ಒದಗಣೆ ಮಾಡಲಾದ ಪೂಲ್‌ಗೆ ಬದ್ಧವಾಗಿರುವ ಸಾಧನಗಳನ್ನು ರಚಿಸಲು ಅವಕಾಶ ದೊರೆಯುತ್ತದೆ. ಶೇಖರಣಾ ಸ್ಥಳವನ್ನು ವೆಚ್ಚ ತಗ್ಗಿಸುವ ಅಗತ್ಯ ಬಿದ್ದಾಗ ವಿರಳವಾಗಿ ಒದಗಣೆ ಮಾಡಲಾದ ಪೂಲ್‌ ಅನ್ನು ಕ್ರಿಯಾತ್ಮಕವಾಗಿ ವಿಸ್ತರಿಸಬಹುದಾಗಿರುತ್ತದೆ. Red Hat Enterprise Linux 6.3 ರಲ್ಲಿ, ಇದನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಪರಿಚಯಿಸಲಾಗಿದೆ. ಈ ಸವಲತ್ತನ್ನು ಬಳಸಿ ನೋಡಲು ನೀವು device-mapper-persistent-data ಪ್ಯಾಕೇಜನ್ನು ಅನುಸ್ಥಾಪಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ, lvcreate ಮಾಹಿತಿ ಪುಟವನ್ನು ನೋಡಿ.
lvmetad ಮೂಲಕ LVM ಮೆಟಾಡೇಟಾದ ಕ್ರಿಯಾತ್ಮಕ ಏಕತ್ರೀಕರಣ
ಹೆಚ್ಚಿನ LVM ಆಜ್ಞೆಗಳಿಗಾಗಿ ವ್ಯವಸ್ಥೆಯಲ್ಲಿನ ಡಿಸ್ಕ್‍ ಸಾಧನಗಳಲ್ಲಿ ಶೇಖರಿಸಿಡಲಾದ LVM ಮೆಟಾಡೇಟಾದ ನಿಖರವಾದ ಮಾಹಿತಿಯ ಅಗತ್ಯವಿರುತ್ತದೆ. ಪ್ರಸ್ತುತ LVM ವಿನ್ಯಾಸದಿಂದಾಗಿ, ಈ ಮಾಹಿತಿಯು ಲಭ್ಯವಿರದೆ ಇದ್ದಲ್ಲಿ, LVM ವ್ಯವಸ್ಥೆಯಲ್ಲಿನ ಎಲ್ಲಾ ಭೌತಿಕ ಡಿಸ್ಕ್‍ ಸಾಧನಗಳನ್ನು ಶೋಧಿಸಬೇಕಾಗುತ್ತದೆ. ಇದಕ್ಕಾಗಿ ವ್ಯವಸ್ಥೆಗಳಲ್ಲಿ ದೊಡ್ಡ ಸಂಖ್ಯೆಯ ಡಿಸ್ಕುಗಳನ್ನು ಹೊಂದಿರುವ ಗಮನಾರ್ಹ ಮೊತ್ತದ I/O ಕಾರ್ಯಾಚರಣೆಗಳ ಅಗತ್ಯವಿರುತ್ತದೆ.
lvmetad ಡೀಮನ್‌ ಉದ್ಧೇಶವು ಪ್ರತಿ ಬಾರಿ ಸಾಧನದ ಸ್ಥಿತಿಯು ಬದಲಾವಣೆಗೊಂಡಾಗ ಮೆಟಾಡೇಟಾ ಮಾಹಿತಿಯನ್ನು ಕ್ರಿಯಾತ್ಮಕವಾಗಿ ಸಂಗ್ರಹಿಸುವ ಮೂಲಕ ಈ ಶೋಧಿಸುವಿಕೆಯನ್ನು ತೆಗೆದುಹಾಕುವುದಾಗಿರುತ್ತದೆ. ಈ ಘಟನೆಗಳನ್ನು udev ನಿಯಮಗಳ ಮುಖಾಂತರ lvmetadಗೆ ಸಂಕೇತದ ರೂಪದಲ್ಲಿ ಸೂಚಿಸಲಾಗುತ್ತದೆ. lvmetad ಎನ್ನುವುದು ಚಾಲನೆಯಲ್ಲಿದೆ ಇದ್ದರೆ, LVM ಸಾಮಾನ್ಯವಾಗಿ ನಿರ್ವಹಿಸುವ ರೀತಿಯಲ್ಲಿಯೆ ಶೋಧಿಸುವಿಕೆಯ ಕಾರ್ಯವನ್ನು ನಡೆಸುತ್ತದೆ.
ಈ ಸವಲತ್ತನ್ನು Red Hat Enterprise Linux 6.3 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ ಮತ್ತು ಪೂರ್ವನಿಯೋಜಿತವಾಗಿ ನಿಷ್ಕ್ರಿಯಗೊಳಿಸಲಾಗಿರುತ್ತದೆ. ಅದನ್ನು ಶಕ್ತಗೊಳಿಸಲು, /etc/lvm/lvm.conf ಕಡತದಲ್ಲಿನ use_lvmetad ನಿಯತಾಂಕವನ್ನು ನೋಡಿ, ಮತ್ತು lvm2-lvmetad init ಸ್ಕ್ರಿಪ್ಟನ್ನು ಸಂರಚಿಸುವ ಮೂಲಕ lvmetad ಅನ್ನು ಸಕ್ರಿಯಗೊಳಿಸಿ.
ಫೈಬರ್ ಚಾನಲ್ ಓವರ್ ಎತರ್ನೆಟ್ (FCoE) ಗುರಿಯ ಸ್ಥಿತಿಯನ್ನು ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ
Red Hat Enterprise Linux 6.3 ರಲ್ಲಿ ಫೈಬರ್ ಚಾನಲ್ ಓವರ್ ಇತರ್ನೆಟ್ (FCoE) ಗುರಿ ಸ್ಥಿತಿಯು ಸಂಪೂರ್ಣ ಬೆಂಬಲಿತವಾಗಿದೆ. ಈ ಕರ್ನಲ್ ಸವಲತ್ತನ್ನು fcoe-target-utils ಪ್ಯಾಕೇಜಿನಿಂದ ಒದಗಿಸಲಾದ targetadmin ಆಗಿ ಸಂರಚಿಸಬಹುದಾಗಿದೆ. FCoE ಅನ್ನು ಡೇಟಾ ಸೆಂಟರ್ ಬ್ರಿಜಿಂಗ್‌ ಅನ್ನು ಬೆಂಬಲಿಸುವ ಜಾಲಬಂಧದಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ (DCB). ಹೆಚ್ಚುವರಿ ವಿವರಗಳು dcbtool(8) ಹಾಗು targetcli(8)(lldpad ಮತ್ತು fcoe-target-utils ಪ್ಯಾಕೇಜುಗಳಿಂದ ಅನುಕ್ರಮವಾಗಿ ಒದಗಿಸಲಾಗಿದೆ) ಮಾಹಿತಿ (ಮ್ಯಾನ್) ಪುಟಗಳಲ್ಲಿ ಲಭ್ಯವಿದೆ.
LVM RAID ಸಂಪೂರ್ಣ ಬೆಂಬಲಿತವಾಗಿದೆ
LVM ನಲ್ಲಿನ ವಿಸ್ತರಿಸಲಾದ RAID ಬೆಂಬಲವು ಈಗ Red Hat Enterprise Linux 6.3 ರಲ್ಲಿ ಸಂಪೂರ್ಣವಾಗಿ ಬೆಂಬಲಿತವಾಗಿರುತ್ತದೆ. LVM ಈಗ RAID 4/5/6 ಲಾಜಿಕಲ್ ವಾಲ್ಯೂಮ್‌ಗಳನ್ನು ಸೃಷ್ಟಿಸುವ ಮತ್ತು ಈ ಲಾಜಿಕಲ್‌ ವಾಲ್ಯೂಮ್‌ಗಳನ್ನು ತದ್ರೂಪುಗೊಳಿಸುವ ಕಾರ್ಯವನ್ನು ನಡೆಸುತ್ತದೆ. MD (ತಂತ್ರಾಂಶ RAID) ಮಾಡ್ಯೂಲ್‌ಗಳು ಈ ಹೊಸ ಸವಲತ್ತುಗಳಿಗಾಗಿ ಬ್ಯಾಕೆಂಡ್ ಬೆಂಬಲವನ್ನು ಒದಗಿಸುತ್ತವೆ.
ಪರಿಮಾಣಗಳನ್ನು (ವಾಲ್ಯೂಮ್‌ಗಳು) ಓದಲು ಮಾತ್ರವಾದ ಸ್ಥಿತಿಯಲ್ಲಿ ಸಕ್ರಿಯಗೊಳಿಸುವಿಕೆ
ಒಂದು ಹೊಸ LVM ಸಂರಚನಾ ಕಡತ ನಿಯತಾಂಕವಾದ activation/read_only_volume_list, ಅಗತ್ಯವಿರುವ ಪರಿಮಾಣಗಳಲ್ಲಿ ನಿಜವಾದ ಅನುಮತಿಗಳು ಯಾವುದೆ ಆಗಿದ್ದರೂ ಸಹ ಯಾವಾಗಲೂ ನಿರ್ದಿಷ್ಟ ವಾಲ್ಯೂಮ್‌ಗಳನ್ನು ಓದಲು-ಮಾತ್ರವಾದ ಸ್ಥಿತಿಯಲ್ಲಿ ಸಕ್ರಿಯಗೊಳಿಸುವುದನ್ನು ಸಾಧ್ಯವಾಗಿಸುತ್ತದೆ. ಈ ನಿಯತಾಂಕವು ಮೆಟಾಡೇಟಾದಲ್ಲಿ ಶೇಖರಿಸಿಡಲಾದ --permission rw ಆಯ್ಕೆಯನ್ನು ಅತಿಕ್ರಮಿಸುತ್ತದೆ.

ಅಧ್ಯಾಯ 10. ಸಾಮಾನ್ಯ ಅಪ್‌ಡೇಟ್‌ಗಳು

ತಂತ್ರಾಂಶ ಸಂಗ್ರಹಣಾ ಸವಲತ್ತುಗಳು
Red Hat Enterprise Linux 6.3 ರಲ್ಲಿ ತಂತ್ರಾಂಶ ಸಂಗ್ರಹಣೆಗಳ ಚಾಲನಾಸಮಯದ ಸವಲತ್ತು ಮತ್ತು ಪ್ಯಾಕೇಜಿಂಗ್ ಮ್ಯಾಕ್ರೊಗಳನ್ನು ಒದಗಿಸುವ scl-utils ಪ್ಯಾಕೇಜನ್ನು ಒದಗಿಸುತ್ತದೆ. ತಂತ್ರಾಂಶ ಸಂಗ್ರಹಗಳನ್ನು ಬಳಸಿಕೊಂಡು ಬಳಕೆದಾರರು ವ್ಯವಸ್ಥೆಯಲ್ಲಿ ಒಂದೆ RPM ಪ್ಯಾಕೇಜಿನ ಹಲವಾರು ಆವೃತ್ತಿಗಳನ್ನು ಅನುಸ್ಥಾಪಿಸಲು ಸಾಧ್ಯವಿರುತ್ತದೆ. scl ಅನ್ನು ಬಳಸಿಕೊಂಡು, ಬಳಕೆದಾರರು /opt ಕೋಶದಲ್ಲಿ ಅನುಸ್ಥಾಪಿಸಲಾದ RPMಗಳ ನಿಶ್ಚಿತ ಆವೃತ್ತಿಗಳನ್ನು ಸಕ್ರಿಯಗೊಳಿಸಬಹುದಾಗಿರುತ್ತದೆ. ತಂತ್ರಾಂಶ ಸಂಗ್ರಹಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ತಂತ್ರಾಂಶ ಸಂಗ್ರಹಗಳ ಮಾರ್ಗದರ್ಶಿಯನ್ನು ನೋಡಿ.
MySQL InnoDB ಪ್ಲಗ್‌ಇನ್
Red Hat Enterprise Linux 6.3 ರಲ್ಲಿ MySQL InnoDB ಶೇಖರಣಾ ಎಂಜಿನ್‌ ಅನ್ನು AMD64 ಮತ್ತು Intel 64 ಆರ್ಕಿಟೆಕ್ಚರುಗಳಿಗಾಗಿನ ಪ್ಲಗ್‌ಇನ್‌ ಆಗಿ ನೀಡಲಾಗಿದೆ. ಈ ಪ್ಲಗ್‌ಇನ್ ಒಳನಿರ್ಮಿತ InnoDB ಶೇಖರನಾ ಎಂಜಿನ್‌ಗಿಂದ ಹೆಚ್ಚಿನ ಸವಲತ್ತುಗಳನ್ನು ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.
OpenJDK 7
Red Hat Enterprise Linux 6.3 ರಲ್ಲಿ OpenJDK 7 ಅನ್ನು ಸಂಪೂರ್ಣವಾಗಿ ಬೆಂಬಲಿತವಾದ OpenJDK 6 ಕ್ಕೆ ಪರ್ಯಾಯವಾಗಿರುವಂತೆ ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ.
ಹೊಸ Java 7 ಪ್ಯಾಕೇಜುಗಳು
java-1.7.0-oracle ಮತ್ತು java-1.7.0-ibm ಪ್ಯಾಕೇಜುಗಳು ಈಗ Red Hat Enterprise Linux 6.3 ರಲ್ಲಿ ಲಭ್ಯವಿವೆ.
initscripts ಮೂಲಕ NIS ಡೊಮೈನ್ ಅನ್ನು ಹೊಂದಿಸುವಿಕೆ
ಬಳಕೆದಾರರು NIS ಡೊಮೈನ್ ಹೆಸರನ್ನು ಹೊಂದಿಸಲು ನೆರವಾಗುವಂತೆ initscripts ಪ್ಯಾಕೇಜನ್ನು ಅಪ್‌ಡೇಟ್‌ ಮಾಡಲಾಗಿದೆ. /etc/sysconfig/network ಕಡತದಲ್ಲಿ, ಅಥವ ಇತರೆ ಸೂಕ್ತವಾದ ಸಂರಚನಾ ಕಡತಗಳಲ್ಲಿ NISDOMAIN ಅನ್ನು ಸೂಚಿಸುವ ಮೂಲಕ ಇದನ್ನು ಸಾಧಿಸಬಹುದಾಗಿದೆ.
logrotate ಗಾಗಿ ACLಬೆಂಬಲ
ಈ ಹಿಂದೆ, ACLಗಳ ಮುಖಾಂತರ ಕೆಲವು ನಿರ್ದಿಷ್ಟ ಗುಂಪುಗಳು ಲಾಗ್‌ಗಳನ್ನು ನಿಲುಕಿಸಿಕೊಳ್ಳಲು ಅನುಮತಿ ಇದ್ದಂತಹ ಸಂದರ್ಭಗಳಲ್ಲಿ, ಈ ಲಾಗ್‌ಗಳನ್ನು ತಿರುಗಿಸಿದಾಗ ACLಗಳು ತೆಗೆದುಹಾಕಲ್ಪಡುತ್ತಿದ್ದವು. Red Hat Enterprise Linux 6.3 ರಲ್ಲಿ, logrotate ಸವಲತ್ತು ACLಗಳನ್ನು ಬೆಂಬಲಿಸುತ್ತದೆ, ಮತ್ತು ತಿರುಗಿಸಲಾದ ಲಾಗ್‌ಗಳಲ್ಲಿ ಇರುವಂತೆ ಯಾವುದೆ ACL ಸಿದ್ಧತೆಗಳನ್ನು ಕಾಪಾಡುತ್ತದೆ.
wacomcpl ಪ್ಯಾಕೇಜನ್ನು ತೆಗೆದುಹಾಕಲಾಗಿದೆ
ಪ್ಯಾಕೇಜುಗಳ ಪಟ್ಟಿಯಿಂದ wacomcpl ಪ್ಯಾಕೇಜನ್ನು ತೆಗೆದುಹಾಕಲಾಗಿದೆ. wacomcpl ಪ್ಯಾಕೇಜು Wacom ಟ್ಯಾಬ್ಲೆಟ್‌ ಸಿದ್ಧತೆಗಳಲ್ಲಿ ಚಿತ್ರಾತ್ಮಕ ಸಂರಚನೆಯನ್ನು ಒದಗಿಸುತ್ತಿತ್ತು. ಈ ಸೌಲಭ್ಯವನ್ನು ಈಗ GNOME ನಿಯಂತ್ರಣ ಕೇಂದ್ರ (ಕಂಟ್ರೋಲ್‌ ಸೆಂಟರಿನಲ್ಲಿ) ಅಳವಡಿಸಲಾಗಿದೆ.
NumPy ಪ್ಯಾಕೇಜಿನ ಅಪ್‌ಡೇಟ್‌
ಯಾವುದೇ ದಾಖಲೆಗಳ ದೊಡ್ಡದಾದ ಬಹು-ಆಯಾಮದ ವ್ಯೂಹಗಳನ್ನು ಚತುರತೆಯಿಂದ ನಿರ್ವಹಿಸುವಂತೆ ವಿನ್ಯಾಸಗೊಳಿಸಲಾದ NumPy ಪ್ಯಾಕೇಜನ್ನು ಆವೃತ್ತಿ 1.4.1 ಕ್ಕೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ ಮಾಡಲಾದ ಆವೃತ್ತಿಯು ಈ ಬದಲಾವಣೆಗಳನ್ನು ಹೊಂದಿರುತ್ತದೆ:
  • 0-d ವ್ಯೂಹಗಳು, numpy.max ಮತ್ತು ಕ್ರಿಯೆಗಳು ಕೇವಲ ಕೆಳಗೆ ನಮೂದಿಸಿದ ನಿಯತಾಂಕಗಳನ್ನು ಮಾತ್ರ ತೆಗೆದುಕೊಳ್ಳುತ್ತವೆ: axis=0, axis=-1, and axis=None. ವ್ಯಾಪ್ತಿಯ ಹೊರಗಿನ ಅಕ್ಷಗಳನ್ನು ಬಳಸಿದಲ್ಲಿ NumPy ಒಂದು ದೋಷವನ್ನು ಸೂಚಿಸುತ್ತದೆ.
  • axis > MAX_DIMS ನಿಯತಾಂಕವನ್ನು ಸೂಚಿಸಲು ಇನ್ನು ಮುಂದೆ ಅನುಮತಿ ಇರುವುದಿಲ್ಲ; NumPy, ಈ ಮೊದಲು axis=None ಎಂದು ನಮೂದಿಸಿದಾಗ ವರ್ತಿಸುತ್ತಿದ್ದ ರೀತಿಯ ಬದಲು ಒಂದು ದೋಷ ಸೂಚನೆಯನ್ನು ನೀಡುತ್ತದೆ.
Rsyslog ಅನ್ನು ಪ್ರಮುಖ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ 5
rsyslog ಪ್ಯಾಕೇಜನ್ನು ಆವೃತ್ತಿ 5 ಕ್ಕೆ ನವೀಕರಿಸಲಾಗಿದೆ. ಈ ನವೀಕರಣಗಳು ಹಲವಾರು ಸುಧಾರಣೆಗಳನ್ನು ಮತ್ತು ಅನೇಕ ದೋಷ ಪರಿಹಾರಗಳನ್ನು ಒದಗಿಸುತ್ತದೆ. ಪ್ರಮುಖ ಬದಲಾವಣೆಗಳನ್ನು ಈ ಕೆಳಗೆ ನೀಡಲಾಗಿದೆ:
  • $HUPisRestart ನಿರ್ದೇಶನವನ್ನು ತೆಗೆದುಹಾಕಲಾಗಿದ್ದು, ಅದನ್ನು ಇನ್ನು ಮುಂದೆ ಬೆಂಬಲಿಸಲಾಗುವುದಿಲ್ಲ. ಆದ್ದರಿಂದ ಮರುಆರಂಭಿಸುವ ಬಗೆಯಾದಂತಹ HUP ಸಂಸ್ಕರಣೆಯು ಇನ್ನು ಮುಂದೆ ಲಭ್ಯವಿರುವುದಿಲ್ಲ. ಈಗ, SIGHUP ಸಂಕೇತವನ್ನು ಸ್ವೀಕರಿಸಿದಾಗ, ಔಟ್‌ಪುಟ್‌ಗಳನ್ನು (ಹೆಚ್ಚಿನ ಸಂದರ್ಭಗಳಲ್ಲಿ ಲಾಗ್ ಕಡತಗಳು) ಬೆಂಬಲ ಲಾಗ್ ಆವೃತ್ತಿಗಳಲ್ಲಿ ಮಾತ್ರ ಮರಳಿ ತೆಗೆಯಲಾಗುತ್ತದೆ.
  • ಸ್ಪೂಲ್ ಕಡತಗಳ ವಿನ್ಯಾಸವನ್ನು (ಉದಾಹರಣೆಗೆ, ಡಿಸ್ಕ್‍-ನೆರವಿನ ಸರತಿಗಳು) ಬದಲಾಯಿಸಲಾಗಿದೆ. ಹೊಸ ವಿನ್ಯಾಸಕ್ಕೆ ಬದಲಾಯಿಸಿಕೊಳ್ಳಲು, ಸ್ಪೂಲ್‌ ಕಡತಗಳನ್ನು ಖಾಲಿ ಮಾಡಿ, ಉದಾ, rsyslogd ಅನ್ನು ಸ್ಥಗಿತಗೊಳಿಸುವ ಮೂಲಕ. ನಂತರ, Rsyslog ನವೀಕರಣದೊಂದಿಗೆ ಮುಂದುವರೆಯಿರಿ, ಮತ್ತು ಪುನಃ ಇನ್ನೊಮ್ಮೆ rsyslogd ಅನ್ನು ಆರಂಭಿಸಿ. ನವೀಕರಣದ ನಂತರ ಹೊಸ ವಿನ್ಯಾಸವನ್ನು ಸ್ವಯಂಚಾಲಿತವಾಗಿ ಬಳಸಲಾಗುತ್ತದೆ.
  • rsyslogd ಡೀಮನ್‌ ಅನ್ನು ದೋಷನಿದಾನ ಸ್ಥಿತಿಯಲ್ಲಿ ಚಲಾಯಿಸುವಾಗ (-d ಆಯ್ಕೆಯನ್ನು ಬಳಸಿಕೊಂಡು), ಅದು ಮುನ್ನೆಲೆಯಲ್ಲಿ ಚಲಾಯಿತಗೊಳ್ಳುತ್ತಿತ್ತು. ಅದನ್ನು ಸರಿಪಡಿಸಲಾಗಿದೆ ಮತ್ತು ಡೀಮನ್ ಈಗ ಫೋರ್ಕ್ ಮಾಡಲಾಗಿದ್ದು, ಅದು ನಿರೀಕ್ಷಿಸಿದಂತೆ ಹಿನ್ನೆಲೆಯಲ್ಲಿ ಚಲಾಯಿತಗೊಳ್ಳುತ್ತದೆ.
Rsyslog ನ ಈ ಆವೃತ್ತಿಯಲ್ಲಿ ಪರಿಚಯಿಸಲಾದ ಬದಲಾವಣೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, http://www.rsyslog.com/doc/v5compatibility.html ಅನ್ನು ನೋಡಿ.

ಪರಿಷ್ಕರಣ ಇತಿಹಾಸ

ಪುರಾವೃತ್ತ ಪರಿಷ್ಕರಣೆ
ಪರಿಷ್ಕರಣೆ 1-0Wed Jun 20 2012Martin Prpič
Red Hat Enterprise Linux 6.3 ರ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ
ಪರಿಷ್ಕರಣೆ 0-0Tue Apr 24 2012Martin Prpič
Red Hat Enterprise Linux 6.3 ರ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ